Select Your Language

Notifications

webdunia
webdunia
webdunia
webdunia

ಇಂದಿನ ಜನಾಂಗಕ್ಕೆ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆಯಂತೆ! ಯಾಕೆ ಗೊತ್ತೇ?!

ಸೆಕ್ಸ್ ಲೈಫ್
ಬೆಂಗಳೂರು , ಮಂಗಳವಾರ, 12 ಜೂನ್ 2018 (09:13 IST)
ಬೆಂಗಳೂರು: ಇಂದಿನ ಯುವ ಜನಾಂಗ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದೆಯಂತೆ! ಹಾಗಂತ ಲಂಡನ್ ನ ವಿವಿ ಅಧ‍್ಯಯನವೊಂದು ಬಹಿರಂಗಪಡಿಸಿದೆ.

ಸಾವಿರಾರು ಜನರ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷಕರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೆಚ್ಚಿನವರು ಸಾಮಾಜಿಕ ಜಾಲತಾಣಗಳ ಒತ್ತಡವೇ ಇದಕ್ಕೆ ಕಾರಣ ಎಂದು ಹೇಳಿದ್ದಾರಂತೆ.

ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣದ ಒತ್ತಡಗಳಿಂದಾಗಿ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದಾಗಿ ಯುವ ಜನತೆ ಹೇಳಿಕೊಂಡಿದ್ದಾರಂತೆ. ಇನ್ನು ಕೆಲವರು, ಸೆಕ್ಸ್ ಬಗ್ಗೆ ಮೊದಲೇ  ತಿಳುವಳಿಕೆ ಮತ್ತು ಸಣ್ಣ ವಯಸ್ಸಿನಲ್ಲೇ ಲೈಂಗಿಕ ಕ್ರಿಯೆ ಅನುಭವ ಪಡೆಯುವುದರಿಂದ ಅದರ ಬಗ್ಗೆ ಹೆಚ್ಚಿನ ಕುತೂಹಲ ಉಳಿದುಕೊಂಡಿರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಞಾಪಕ ಶಕ್ತಿ ವೃದ್ಧಿಗೆ ಈ ಹಣ್ಣು ತುಂಬಾ ಉಪಯೋಗಕಾರಿ