Select Your Language

Notifications

webdunia
webdunia
webdunia
webdunia

ಎಡಬದಿಗೆ ಮಲಗುವುದರ ಲಾಭವೇನು?

ಎಡಬದಿಗೆ ಮಲಗುವುದರ ಲಾಭವೇನು?
Bangalore , ಬುಧವಾರ, 14 ಜೂನ್ 2017 (08:40 IST)
ಬೆಂಗಳೂರು: ಮಲಗುವಾಗ ನಾವು ಹೇಗೆ ಮಲಗಬೇಕು? ಯಾವ ಬದಿಗೆ ಹೊರಳಿ ಮಲಗಿದರೆ ಉತ್ತಮ? ಎಡಬದಿಗೆ ಹೊರಳಿ ಮಲಗುವುದು ಒಳ್ಳೆಯದು ಎನ್ನುತ್ತಾರೆ. ಏನಿದರ ಉಪಯೋಗ ನೋಡೋಣ.

 
ಜೀರ್ಣಕ್ರಿಯೆ
ನಮ್ಮ ಹೊಟ್ಟೆ ಹಾಗೂ ಜೀರ್ಣಗ್ರಂಥಿ ಇರುವುದು ಎಡಭಾಗದಲ್ಲಿ. ಹಾಗಾಗಿ ಎಡಬದಿಗೆ ಹೊರಳಿ ಮಲಗುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಆಹಾರ ಸುಲಭವಾಗಿ ಹೊಟ್ಟೆ ಸೇರುತ್ತದೆ ಮತ್ತು ಆಹಾರದಲ್ಲಿರುವ ಬೇಡದ ಅಂಶ ಬೇಗನೇ ಬೇರ್ಪಡುತ್ತದೆ. ಆಯುರ್ವೇದದ ಪ್ರಕಾರ ಊಟವಾದ ತಕ್ಷಣ ಕನಿಷ್ಠ 10 ನಿಮಿಷ ಈ ರೀತಿ ಎಡಬದಿಗೆ ಹೊರಳಿ ಮಲಗುವುದು ಒಳ್ಳೆಯದು.

ಹೃದಯದ ಆರೋಗ್ಯಕ್ಕೆ
ಎಡಭಾಗದಲ್ಲಿ ಹೃದಯವಿದೆ. ಹೀಗಾಗಿ ಈ ಭಾಗಕ್ಕೆ ಹೊರಳಿ ಮಲಗುವುದರಿಂದ ಹೃದಯಕ್ಕೆ ರಕ್ತ ಸಂಚಾರ ಸುಗಮವಾಗುತ್ತದೆ. ಇದರಿಂದ ಹೃದಯಕ್ಕೂ ಸ್ವಲ್ಪ ವಿಶ್ರಾಂತಿ ದೊರಕುವುದು.

ಗರ್ಭಿಣಿ ಮಹಿಳೆಯರು
ಗರ್ಭಿಣಿ ಮಹಿಳೆಯರು ಎಡಭಾಗಕ್ಕೆ ತಿರುಗಿ ಮಲಗಲು ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ಗರ್ಭಕೋಶಕ್ಕೆ ಹೆಚ್ಚು ರಕ್ತ ಪೂರೈಕೆಯಾಗುತ್ತದೆ. ಅಲ್ಲದೆ ಗರ್ಭಿಣಿಯಾಗಿದ್ದಾಗ ಬೆನ್ನುಲುಬಿಗೆ ಹೆಚ್ಚಿನ ಶ್ರಮವಿರುತ್ತದೆ. ಹೀಗೆ ಮಲಗುವುದರಿಂದ ಬೆನ್ನುಲುಬಿಗೂ ವಿಶ್ರಾಂತಿ ಸಿಗುವುದು.

ಗೊರಕೆ ಹೊಡೆಯುವುದಕ್ಕೆ!
ನೀವು ನಂಬುತ್ತೀರೋ ಬಿಡುತ್ತೀರೋ ಗೊರಕೆ ಹೊಡೆಯುವವರು ಎಡಭಾಗಕ್ಕೆ ಹೊರಳಿ ಮಲಗಿದರೆ ಗೊರಕೆ ಹೊಡೆಯುವುದು ಕಡಿಮೆಯಾಗುತ್ತದೆ. ಹೀಗೆ ಮಲಗುವುದರಿಂದ ಗಂಟಲು ಮತ್ತು ಬಾಯಿ ತೆರೆದುಕೊಳ್ಳುವುದರ ಸಂಭವ ಇಲ್ಲ. ಇದರಿಂದ ಉಸಿರಾಟ ಸರಾಗವಾಗುವುದಲ್ಲದೆ, ಗೊರಕೆ ಶಬ್ಧವೂ ಹೊರ ಬರದು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೋ ಮಾಂಸಾಹಾರ, ನೋ ಸೆಕ್ಸ್: ಗರ್ಭಿಣಿಯರಿಗೆ ಆಯುಷ್ ಸಲಹೆ