Select Your Language

Notifications

webdunia
webdunia
webdunia
webdunia

ನೋ ಮಾಂಸಾಹಾರ, ನೋ ಸೆಕ್ಸ್: ಗರ್ಭಿಣಿಯರಿಗೆ ಆಯುಷ್ ಸಲಹೆ

Pregnant Women
ನವದೆಹಲಿ , ಮಂಗಳವಾರ, 13 ಜೂನ್ 2017 (16:27 IST)
ನವದೆಹಲಿ: ಸಾಂಪ್ರದಾಯಿಕ ಔಷಧಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸ್ಥಾಪನೆಗಾರುವ ಆಯುಷ್ ಇಲಾಖೆ ವೈಜ್ನಾನಿಕ ಮಾಹಿತಿ ಬದಲಿಗೆ ಹಲವು ಅವೈಜ್ನಾನಿಕ ಮಾಹಿತಿ ಪ್ರಸಾರ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
 
ಆಯುಷ್ ಸಚಿವಾಲಯದ ವಿರುದ್ಧದ ಈ ಆರೋಪಕ್ಕೆ ಕಾರಣ ಇಲಾಖೆತ್ಯ ಸಹಾಯಕ ಸಚಿವ ಶ್ರೀಪಾದ್ ನಾಯಕ್ ಬಿಡುಗಡೆ ಮಾಡಿರುವ ತಾಯಿ ಮತ್ತುಇ ಮಗು ಆರೈಕೆ ಕೈಪಿಡಿ. ಈ ಕೈಪಿಡಿಯಲ್ಲಿ ಕೆಲವು ತಪ್ಪು ಸಲಹೆಗಳಿವೆ ಎನ್ನಲಾಗಿದೆ.
 
ಗರ್ಬಿಣಿಯರು ಮಾಂಸಾಹಾರ ಸೇವಿಸಬಾರದು, ಗರ್ಬ ಧರಿಸಿದ ನಂತರ ಕೈಂಗಿಕ ಕ್ರಿಯೆಯಲ್ಲಿ ತೊಡಗಬಾರದು, ಕೆಟ್ಟ ಸಹವಾಸ ಮಾಡಬಾರದು, ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಕೊಠಡಿಯಲ್ಲಿ ಆರೋಗ್ಯವಂತ ಮಗುವಿನ ಸುಂದರ ಚಿತ್ರ ಅಂಟಿಸಿಕೊಂಡಿರಬೇಕು; ಇದು ಮಗುವಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು, ಪ್ರಶಾಂತ ಪರಿಸರದಲ್ಲಿ ಸಜ್ಜನರ ಸಹವಾಸದಲ್ಲಿರಬೇಕು, ಮಾಹಾತ್ಮರ ಜೀವನ ಚರಿತ್ರೆ ಓದಬೇಕು, ಕಾಮ, ಕ್ರೋಧ, ಮೋಹ, ಭೋಗಾಪೇಕ್ಷೆಯಿಂದ ದೂರವಿರಬೇಕು, ಸಮಾಧಾನ ಚಿತ್ತದಿಂದಿರಬೇಕು ಎಂಬ ಸಲಹೆ ನೀಡಲಾಗಿದೆ. ಇವುಗಳಲ್ಲಿ ಕೆಲವು ಅವೈಜ್ನಾನಿಕ ಹಾಗೂ ರುಜುವಾತಾಗದ ಅಂಶವಾಗಿದೆ ಎಂದು ಹಲವು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಲಕ್ಕೊಂದಷ್ಟು ಹೆಲ್ತ್ ಟಿಪ್ಸ್