Select Your Language

Notifications

webdunia
webdunia
webdunia
webdunia

ಸಿಹಿ ತಿನಿಸು ತಿಂದಾಗ ಬಾಯಾರಿಕೆಯಾಗುವುದು ಯಾಕೆ ಗೊತ್ತಾ

Sweet

Krishnaveni K

ಬೆಂಗಳೂರು , ಶುಕ್ರವಾರ, 29 ಮಾರ್ಚ್ 2024 (12:58 IST)
ಬೆಂಗಳೂರು: ಸಾಮಾನ್ಯವಾಗಿ ಸಕ್ಕರೆ, ಸಿಹಿ ತಿನಿಸು, ಚಾಕಲೇಟ್ ಇತ್ಯಾದಿ ಯಾವುದೇ ಸಿಹಿ ಪದಾರ್ಥ ಸೇವಿಸಿದಾಗ ನಮಗೆ ಬಾಯಾರಿಕೆಯ ಅನುಭವವಾಗುತ್ತದೆ. ಇದು ಯಾಕೆ ಎಂದು ಯೋಚಿಸಿದ್ದೀರಾ?

ಸಿಹಿ ತಿನಿಸು ಯಾವುದೇ ಇರಲಿ, ಬಾಯಿಗೆ ರುಚಿಯೆನಿಸುತ್ತದೆ. ಸಿಹಿ ತಿನಿಸನ್ನು ಚಪ್ಪರಿಸಿಕೊಂಡು ತಿನ್ನುತ್ತೇವೆ. ಆದರೆ ಸಿಹಿ ಸೇವಿಸಿದ ತಕ್ಷಣ ನಮಗೆ ಏನಾದರೂ ಪಾನೀಯ ಕುಡಿಯಬೇಕೆನಿಸುತ್ತದೆ. ಬಾಯಾರಿಕೆ ಜೋರಾಗುತ್ತದೆ. ಇದಕ್ಕೆ ವೈದ್ಯಕೀಯವಾಗಿ ಕಾರಣವೂ ಇದೆ.

ಸಿಹಿ ತಿನಿಸು ಸೇವಿಸಿದ ತಕ್ಷಣ ನಮ್ಮ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆಯಾಗುತ್ತದೆ. ಪರಿಣಾಮ, ನಿಮಗೆ ತಕ್ಷಣವೇ ಮೂತ್ರಿಸಬೇಕು ಎನಿಸಬಹುದು. ಇದರ ಮುಂದುವರಿದ ಭಾಗವಾಗಿ ದೇಹದಲ್ಲಿ ನಿರ್ಜಲೀಕರಣದ ಮಟ್ಟ ಏರಿಕೆಯಾಗುತ್ತದೆ. ಆಗ ದೇಹ ನೀರು ಅಥವಾ ಪಾನೀಯ ಸೇವಿಸಲು ಸಂದೇಶ ನೀಡುತ್ತದೆ.

ಇದ್ದಕ್ಕಿದ್ದಂತೆ ದೇಹದಲ್ಲಿ ಗ್ಲುಕೋಸ್ ಮಟ್ಟ ಏರಿಕೆಯಾದಾಗ ಅದನ್ನು ಹೊರಹಾಕಲು ಕಿಡ್ನಿ ಮೂತ್ರ ವಿಸರ್ಜನೆಗೆ ಸಂದೇಶ ಕೊಡುತ್ತದೆ. ಆಗ ಸಹಜವಾಗಿಯೇ ನಮ್ಮ ದೇಹಕ್ಕೆ ನೀರಿನಂಶ ಬೇಕಾಗುತ್ತದೆ. ಅತಿಯಾಗಿ ಸಿಹಿ ತಿಂದಾಗ ದೇಹದಲ್ಲಿ ಗ್ಲುಕೋಸ್ ಮಟ್ಟ ವ್ಯತ್ಯಾಸವಾಗುತ್ತದೆ. ಆಗ ದೇಹದಲ್ಲಿ ಹೈಡ್ರೇಷನ್ ಮಟ್ಟ ಸಮತೋಲನದಲ್ಲಿರಲು ಬಾಯಾರಿಕೆಯ ಅನುಭವವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಈ ಐದು ಹಣ್ಣುಗಳನ್ನು ಸೇವಿಸಿ: ಅಚ್ಚರಿ ಬದಲಾವಣೆ ಕಾಣುತ್ತೀರಿ