Publish Date: Mon, 25 Mar 2024 (12:54 IST)
Updated Date: Mon, 25 Mar 2024 (12:58 IST)
ಬೆಂಗಳೂರು: ನಾವು ಪ್ರತಿನಿತ್ಯ ಅಡುಗೆ ಮನೆಯಲ್ಲಿ ಬಳಸುವ ಅರಿಶಿನದಿಂದ ನಮಗೆ ಅನೇಕ ಆರೋಗ್ಯಕರ ಲಾಭಗಳಿವೆ. ಅದರಲ್ಲೂ ವಿಶೇಷವಾಗಿ ಸಂಧಿವಾತಕ್ಕೆ ಇದು ಅತ್ಯುತ್ತಮ ಔಷಧಿ.
ಚಿಟಿಕೆ ಅರಿಶಿನ ಬಳಕೆಯಿಂದ ಒಂದು ವಯಸ್ಸಾದಂತೆ ಕಂಡುಬರುವ ಸಂಧಿವಾತ ಸಮಸ್ಯೆಗೆ ಪರಿಹಾರವಿದೆ ಎಂದು ಅನೇಕ ಅಧ‍್ಯಯನಗಳೇ ಹೇಳಿವೆ. ಇದರಲ್ಲಿ ಉತ್ಕರ್ಷಣಾ ನಿರೋಧಕ, ರೋಗ ನಿರೋಧಕ ಅಂಶ ಹೇರಳವಾಗಿದ್ದು, ನೋವು ನಿವಾರಕವಾಗಿಯೂ ಕೆಲಸ ಮಾಡುತ್ತದೆ.
ಅರಿಶಿನವನ್ನು ಯಾವುದೇ ರೀತಿಯಲ್ಲಿ ಬೇಕಾದರೂ ಬಳಸಬಹುದು. ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಚಿಟಿಕೆ ಅರಿಶಿನ ಹಾಕಿದ ನೀರನ್ನು ಸೇವಿಸಿದರೆ ನಮಗೆ ಅನೇಕ ಲಾಭಗಳಿವೆ. ಇದರಿಂದ ತೂಕ ಇಳಿಕೆಗೂ ಸಹಕಾರಿ. ಜೊತೆಗೆ ಸಂಧಿವಾತದ ಸಮಸ್ಯೆಯನ್ನೂ ದೂರ ಮಾಡುತ್ತದೆ.
ಅರಿಶಿನದಲ್ಲಿ ಉರಿಯೂತದ ಲಕ್ಷಣಗಳನ್ನು ಕಡಿಮೆ ಮಾಡುವ ಗುಣವಿದೆ. ಇದರಿಮದಾಗಿ ಸಂಥಿವಾತದ ನೋವು ಕಡಿಮೆಯಾಗುತ್ತದೆ. ಅದೇ ಕಾರಣಕ್ಕೆ ಅನೇಕ ಆಯುರ್ವೇದ ಔಷಧಿಗಳಲ್ಲೂ ಅರಿಶಿಣವನ್ನು ಬಳಸಲಾಗುತ್ತದೆ.