Select Your Language

Notifications

webdunia
webdunia
webdunia
webdunia

ದಿನದಲ್ಲಿ ಯಾವಾಗ ಖರ್ಜೂರ ತಿನ್ನಬೇಕು?

ದಿನದಲ್ಲಿ ಯಾವಾಗ ಖರ್ಜೂರ ತಿನ್ನಬೇಕು?
ಬೆಂಗಳೂರು , ಶುಕ್ರವಾರ, 24 ಸೆಪ್ಟಂಬರ್ 2021 (07:03 IST)
Dates health benefits: ಖರ್ಜೂರ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ? ಅದರಲ್ಲೂ ಈ ಮಳೆಗಾಲದ ಸಮಯದಲ್ಲಿ ಖರ್ಜೂರ ತಿಂದರೆ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆಯಬಹುದು.

 ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಸಮತೋಲಿತ ಆಹಾರ ಈ ಖರ್ಜೂರ. ಖರ್ಜೂರ ತೊಂದರೆ ನಮ್ಮ ದೇಹದಲ್ಲಿ ಅನಿರೀಕ್ಷಿತ ಆರೋಗ್ಯಕರ ಬದಲಾವಣೆಗಳು ಉಂಟಾಗುತ್ತವೆ. ಪೋಷಕಾಂಶಗಳಿಂದ ತುಂಬಿರುವ ಈ ಖರ್ಜೂರದ ಮಹತ್ವವನ್ನು ಇಲ್ಲಿ ಅರಿಯೋಣ.
ಖರ್ಜೂರವನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ವಿಶೇಷವಾಗಿ ಮಳೆಗಾಲದಲ್ಲಿ ಇವುಗಳನ್ನು ತಿನ್ನುವುದರಿಂದ ಹೆಚ್ಚಿನ ಲಾಭಗಳು ದೊರೆಯುತ್ತವೆ. ಪೌಷ್ಟಿಕ ತಜ್ಞರು ಕೂಡ ಇದನ್ನೇ ಹೇಳುತ್ತಾರೆ.
webdunia

ಖರ್ಜೂರ ನಮ್ಮ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಹಿಮೋಗ್ಲೋಬಿನ್ ಮಟ್ಟವೂ ಹೆಚ್ಚಾಗುತ್ತದೆ. ದಿನನಿತ್ಯ ಖರ್ಜೂರ ತಿನ್ನುವುದರಿಂದ ನಿದ್ರೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಖರ್ಜೂರಗಳು ಅಲರ್ಜಿ ಹಾಗೂ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತವೆ.
ಖರ್ಜೂರ ತಿನ್ನುವುದರಿಂದ ಅಸಿಡಿಟಿ, ಮಲಬದ್ಧತೆ ನಿವಾರಣೆಯಾಗುತ್ತದೆ. ಖರ್ಜೂರದಲ್ಲಿ ಫೈಬರ್, ಪೊಟ್ಯಾಶಿಯಂ ಮತ್ತು ಕಬ್ಬಿಣಾಂಶ ಅಧಿಕವಾಗಿದೆ. ಅದಕ್ಕಾಗಿಯೇ ನೀವು ಸಕ್ಕರೆ ತಿನ್ನಲು ಬಯಸಿದಾಗ, ಖರ್ಜೂರ ತಿಂದರೆ ಆರೋಗ್ಯ ಉತ್ತಮವಾಗಿರುತ್ತದೆ. ದೇಹಕ್ಕೆ ಶಕ್ತಿಯೂ ಸಿಗುತ್ತದೆ.
webdunia

ಖರ್ಜೂರಗಳು ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುವುದರಿಂದ ಅವುಗಳನ್ನು ಡಯಾಬಿಟಿಸ್ ಇರುವ ಜನರೂ ಸಹ ಸೇವಿಸಬಹುದು. ಇದರಲ್ಲಿರುವ ಫೈಟೊಕೆಮಿಕಲ್ಸ್ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನದಲ್ಲಿ ಖರ್ಜೂರ ಯಾವಾಗ ತಿನ್ನಬೇಕು ಎಂಬುದನ್ನೂ ಸಹ ಪೌಷ್ಟಿಕ ತಜ್ಞರು ಹೇಳಿದ್ದಾರೆ.
webdunia

ಪ್ರತಿದಿನ ಬೆಳಗ್ಗೆ ಖರ್ಜೂರವನ್ನು ತಿನ್ನವೇಕು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ನೀವು ರಕ್ತದಲ್ಲಿ ಕಡಿಮೆ ಹಿಮೋಗ್ಲೋಬಿನ್ ಮಟ್ಟ ಹೊಂದಿದ್ದರೆ, ಊಟದ ಬಳಿಕ ಸ್ವಲ್ವ ಹೊತ್ತು ಬಿಟ್ಟು ಖರ್ಜೂರ ಸೇವಿಸಿ. ಮಕ್ಕಳು ಖರ್ಜೂರವನ್ನು ಉಪಾಹಾರ ಮತ್ತು ಊಟದ ನಡುವೆ ತಿನ್ನಬಹುದು.
ನೀವು ತಿನ್ನುವ ಖರ್ಜೂರಗಳು ತಾಜಾ ಆಗಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಸೂಪರ್ ಮಾರ್ಕೆಟ್ನಲ್ಲಿ ಖರೀದಿಸುವುದಕ್ಕಿಂದ ಮಾರ್ಕೆಟ್ನಲ್ಲಿ ಖರೀದಿಸಿದರೆ ಉತ್ತಮ ಗುಣಮಟ್ಟದ ಖರ್ಜೂರ ಸಿಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಲದಲ್ಲಿ ಸೇವಿಸಿ ಈ ತುಳಸಿ ಕಷಾಯ