Select Your Language

Notifications

webdunia
webdunia
webdunia
webdunia

ತೂಕ ಹೆಚ್ಚಿಸಿಕೊಳ್ಳಬೇಕೆ? ಹೀಗೆ ಮಾಡಿ

ತೂಕ ಹೆಚ್ಚಿಸಿಕೊಳ್ಳಬೇಕೆ? ಹೀಗೆ ಮಾಡಿ
, ಶುಕ್ರವಾರ, 6 ಮೇ 2016 (18:23 IST)
ಕೆಲವರು ಹೆಚ್ಚೇನು ತಿಂದದಿದ್ದರೂ ದಪ್ಪಗಾಗುತ್ತ ಹೋಗುತ್ತಾರೆ. ಕೆಲವರು ಎಷ್ಟೇ ಪ್ರಯತ್ನಪಟ್ಟರೂ ತೂಕವನ್ನು ಹೆಚ್ಚಿಸಿಕೊಳ್ಳಲಾಗುವುದಿಲ್ಲ. ನಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ನೀವು ಸಹ ತೂಕವನ್ನು ಹೆಚ್ಚಿಸಿಕೊಳ್ಳಲು ಪರದಾಡುತ್ತಿದ್ದೀರಾ? ಒಮ್ಮೆ ಈ ಸುಲಭ ಸಲಹೆಗಳನ್ನು ಪ್ರಯತ್ನಿಸಿ ನೋಡಿ...

*ಹೆಚ್ಚೆಚ್ಚು ತಿನ್ನಿ: ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಹೊಟ್ಟೆ ಬಿರಿಯುವ ಹಾಗೆ ತಿನ್ನುವ ಬದಲು ದಿನಕ್ಕೆ ಐದಾರು ಸಲ ಸ್ವಲ್ಪ ಸ್ವಲ್ಪ ತಿನ್ನಿ.ರಾತ್ರಿ ಊಟದ ಬಳಿಕ ಸಿಹಿ ತಿನ್ನಿ.
 
*ಪೋಷಕಾಂಶ ಭರಿತ ಆಹಾರಗಳು ಆಯ್ಕೆ:  ಆರೋಗ್ಯಕರ ಆಹಾರದ ಭಾಗವಾಗಿ, ಪೂರ್ಣ ಧಾನ್ಯ,ಕಾಳುಗಳು, ಪಾಸ್ತಾ, ಹಣ್ಣುಗಳು ಮತ್ತು ತರಕಾರಿಗಳು; ಹಾಲಿನ ಉತ್ಪನ್ನಗಳು; ನೇರ ಪ್ರೋಟೀನ್ ಮೂಲಗಳು, ಬೀಜಗಳನ್ನು ಬಳಸಿ
 
*ಜ್ಯೂಸ್ ಮತ್ತು ಶೇಕ್ಸ್ ಸೇವಿಸಿ: ಕಡಿಮೆ ಕ್ಯಾಲೋರಿ, ಕಡಿಮೆ ಪೌಷ್ಟಿಕಾಂಶದ ಡಯಟ್ ಸೋಡಾ, ಕಾಫಿ ತ್ಯಜಿಸಿ. ಅದರ ಬದಲಿಗೆ
ಹಣ್ಣು-ತರಕಾರಿ ಜ್ಯೂಸ್,  ಆರೋಗ್ಯಕರ ಶೇಕ್ಸ್ ಕುಡಿಯಿರಿ. ದ್ರವ ಪದಾರ್ಥಗಳು ಸಹ ಸಹಾಯಕ.
 
*ಊಟ ಮಾಡುವಾಗ ಹೆಚ್ಚೆಚ್ಚು ನೀರು ಕುಡಿಯಬೇಡಿ. 
 
* ಬೆಳಗ್ಗಿನ ಉಪಾಹಾರ ಮಿಸ್ ಮಾಡಬೇಡಿ: ಬೆಳಗ್ಗಿನ ಉಪಾಹಾರ ದಿನದ ಅತೀ ಪ್ರಮುಖ ಆಹಾರ. ರಾತ್ರಿಯ ನಿದ್ದೆಯ ಬಳಿಕ ಬೆಳಗಿನ ಉಪಾಹಾರ ದೇಹಕ್ಕೆ ಬೇಕಾಗಿರುವ ಶಕ್ತಿ ತುಂಬುತ್ತದೆ. ಏನೂ ತಿನ್ನದಿದ್ದರೆ ನಿಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.
 
*ಇತರರೊಂದಿಗೆ ಊಟ ಮಾಡುವಾಗ ನೀವು ಎಷ್ಟು ತಿನ್ನುತ್ತೀರಿ ಎನ್ನುವ ಬಗ್ಗೆ ಲೆಕ್ಕವೇ ಇರಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ಊಟ ಮಾಡುವಾಗ ಮತ್ತೊಬ್ಬ ವ್ಯಕ್ತಿಯಿದ್ದರೆ ನೀವು ಸಾಮಾನ್ಯವಾಗಿ ತಿನ್ನುವುದಕ್ಕಿಂತ ಶೇ. 35ರಷ್ಟು ಹೆಚ್ಚು ತಿನ್ನುತ್ತೀರಿ. 4 ಮಂದಿಯೊಂದಿಗೆ ಊಟ ಮಾಡುತ್ತಿದ್ದರೆ ನೀವು ಶೇ. 75ರಷ್ಟು ಹೆಚ್ಚಿಗೆ ತಿನ್ನುತ್ತೀರಂತೆ. ಇದು ನಿಮ್ಮ ದೇಹದ ತೂಕವನ್ನು ಹತ್ತು ಕೆ.ಜಿಯಷ್ಟು ಹೆಚ್ಚಿಸುತ್ತದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಜೀರ್ಣ ತೊಂದರೆಗೆ ರಾಮಬಾಣ ಈ ಆಹಾರಗಳು