ಇಂದಿನ ದಿನಗಳಲ್ಲಿ ಸಾಕಷ್ಟು ಜನರು ಆಗಾಗ ಹೊಟ್ಟೆ ನೋವು ಮತ್ತು ಅಜೀರ್ಣ ತೊಂದರೆಯಿಂದ ಬಳಲುತ್ತಿದ್ದಾರೆ. ಆದರೆ ಅಜೀರ್ಣ ಹೇಗೆ ಉಂಟಾಗುತ್ತದೆ ಎಂದು ನಿಮಗೆ ಗೊತ್ತೆ? ಒತ್ತಡ, ಕಳಪೆ ಆಹಾರ ಪದ್ಧತಿ, ಹಾನಿಕಾರಕ ಪರಿಸರ, ವೈರಲ್ ಸೋಂಕು ಅಜೀರ್ಣಗೆ ಮುಖ್ಯ ಕಾರಣಗಳಾಗಿವೆ. ಆರೋಗ್ಯಕರ ಆಹಾರ ಸೇವನೆಯಿಂದ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಬಹುದಾಗಿದೆ.
ಜೀರ್ಣಕ್ರಿಯೆಗೆ ಸಹಾಯವಾಗುವ ಕೆಲವು ಉತ್ತಮ ಆಹಾರಗಳು
ಓಟ್ಸ್
ಓಟ್ಸ್‌ನಲ್ಲಿ ಫೈಬರ್ ಪ್ರಮಾಣ ಹೆಚ್ಚಿರುವುದರಿಂದ ಹೊಟ್ಟೆಗೆ ಉತ್ತಮವಾದ ಆಹಾರವಾಗಿದ್ದು, ಇದು ಕರುಳಿನ ಕ್ರಮಬದ್ಧತೆ ನಿರ್ವಹಿಸಲು ಮಲಬದ್ಧತೆ ತಡೆಯಲು ಸಹಾಯ ಮಾಡುತ್ತದೆ.
ಮೊಸರು
ಮೊಸರು ಸಾಮಾನ್ಯವಾಗಿ ಜೀರ್ಣ ಪ್ರಕ್ರಿಯೆಯನ್ನು ಪ್ರಮುಖ ಪಾತ್ರವಹಿಸುತ್ತದೆ. ಮೊಸರಿನಲ್ಲಿ (ಲ್ಯಾಕ್ಟೋಬಸಿಲ್ಲಿ) ಬ್ಯಾಕ್ಟೀರಿಯ ಸಮೃದ್ಧ ಪ್ರಮಾಣದಲ್ಲಿದ್ದು, ಅಜೀರ್ಣ, ಅತಿಸಾರ, ಮಲಬದ್ಧತೆ ಮತ್ತು ಅನೇಕ ಹೊಟ್ಟೆಯ ಸಮಸ್ಯೆಗಳಿಗೆ ಸಹಕಾರಿಯಾಗಿದೆ.
ಬೀಟ್ರೂಟ್
ಬೀಟ್ರೂಟ್‌ನಲ್ಲಿ ಫೈಬರ್ ಪ್ರಮಾಣ ಅಧಿಕವಾಗಿದೆ. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳನ್ನು ಒಳಗೊಂಡಿದ್ದು, ಹೊಟ್ಟೆ ನೋವು, ಮಲಬದ್ಧತೆ ತಡೆಯುವುದರ ಜೊತೆಗೆ ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತದೆ.
ಸೇಬು
ಜೀರ್ಣ ಪ್ರಕ್ರಿಯೆಗೆ ಸೇಬು ಹಣ್ಣು ಉತ್ತಮವಾದ ಆಹಾರ ಎಂದು ಬಹಳಷ್ಟು ಜನರಿಗೆ ತಿಳಿದ್ದಿಲ್ಲ. ಈ ಪದಾರ್ಥ ಕರಗುವ ಮತ್ತು ಕರಗಲಾರದ ಫೈಬರ್ ಅಂಶವನ್ನು ಹೊಂದಿದೆ. ಸೇಬು ಹಣ್ಣಿನಲ್ಲಿರುವ ಕರಗಲಾರದ ಫೈಬರ್ ಅಂಶ ಮಲಬದ್ಧತೆ ನಿವಾರಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.
ಬಾಳೆಹಣ್ಣು
ಜೀರ್ಣ ಪ್ರಕ್ರಿಯೆಗೆ ಬಾಳೆ ಹಣ್ಣು ಸಹ ಉತ್ತಮವಾದ ಆಹಾರವಾಗಿದ್ದು, ಟಾಕ್ಸಿನ್ಸ್ ಹೀರಿಕೊಳ್ಳುವ ಮೂಲಕ ಜೀರ್ಣ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಬಾಳೆ ಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ಫೈಬರ್ ಅಂಶ ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಾಯವಾಗಿದೆ.