Select Your Language

Notifications

webdunia
webdunia
webdunia
webdunia

ಸದಾ ಖುಷಿಯಾಗಿರಲು ಏನ್ ಮಾಡ್ಬೇಕು? ಈ ನಿಯಮಗಳನ್ನು ಪಾಲಿಸಿ

ಸದಾ ಖುಷಿಯಾಗಿರಲು ಏನ್ ಮಾಡ್ಬೇಕು? ಈ ನಿಯಮಗಳನ್ನು ಪಾಲಿಸಿ
ಬೆಂಗಳೂರು , ಭಾನುವಾರ, 16 ಜನವರಿ 2022 (18:29 IST)
ಬೆಳಗ್ಗೆ ನಡೆದ ಯಾವುದೋ ಘಟನೆಗೆ  ಇಡೀ ದಿನ ಕೊರಗುತ್ತೇವೆ ಇದು ಮನಸ್ಸಿನ ಆರೋಗ್ಯಕ್ಕೂ ಒಳ್ಳೆಯದಲ್ಲ.

ಸಮಸ್ಯೆಗಳು ನೂರಿದ್ದರೂ ಮುಖದಲ್ಲೊಂದು ಮುಗುಳ್ನಗೆ ಇದ್ದರೆ ನೋವನ್ನು ಮರೆಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಸಂತೋಷವಾಗಿರುವುದು ಕಷ್ಟ. ಅಂತಹ ಸಂದರ್ಭಗಳಲ್ಲಿ ಯೋಚಿಸುವ ವಿಷಯಗಳನ್ನು ಬದಲಾಯಿಸಿಕೊಂಡರೆ ಅಥವಾ ಅದೇ ವಿಷಯದ ಧನಾತ್ಮಕ ಅಂಶವನ್ನು ಪರಿಗಣಿಸಿ ಯೋಚಿಸಿದರೆ ನೆಮ್ಮದಿಯಿಂದ ಬದುಕಬಹುದು.

ಹೀಗಾಗಿ ಖುಷಿಯ ಬದುಕು ನಮ್ಮ ಕೈನಲ್ಲೇ ಇದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳು, ಸವಾಲುಗಳನ್ನು ಎದುರಿಸಿಯೂ ಸಂತೋಷವಾಗಿರಬಹುದು. ಇದಕ್ಕೆ ಹಾರ್ವರ್ಡ್ ಮೆಡಿಕಲ್ ಸ್ಕೂಲನ್ನ ತಜ್ಞರು ಸರಳವಾದ ಮೂರು ನಿಯಮಗಳನ್ನು ತಿಳಿಸಿದ್ದಾರೆ.

ಕೆಲವು ಕೆಟ್ಟ ಘಟನೆಗಳು ಆಳದ ಯೋಚನೆಗೆ ತಳ್ಳಿಬಿಡುತ್ತವೆ. ಅಂತಹ ಯೋಚನೆಗಳಿಗೆ ದಾಸರಾಗದೆ ಅವುಗಳಿಂದ ಹೊರಬಂದು ಸಕ್ರಿಯರಾಗಿರಬೇಕು. ಮಾನಸಿಕ ಖಿನ್ನತೆಯಿಂದ ಯಾವ ಸಮಸ್ಯೆಗಳೂ ಪರಿಹಾರವಾಗಲು ಸಾಧ್ಯವಿಲ್ಲ.

ಅದೇ ರೀತಿ ಖಿನ್ನತೆಗೆ ಒಳಗಾದ ವ್ಯಕ್ತಿಗೆ ಯಾವ ವೈದ್ಯರ ಮಾತ್ರೆಯೂ ಗುಣಮುಖರನ್ನಾಗಿ ಮಾಡಲು ಸಾಧ್ಯವಿಲ್ಲ. ಯೋಚನೆಯಲ್ಲಿ ಸಿಲುಕಿ  ಪರದಾಡುವುದಕ್ಕಿಂತ ಅದರಿಂದ ಹೊರಬಂದು ಸಕ್ರಿಯರಾಗಿರಿ. ನಿಮ್ಮನ್ನು ನೀವು ನಿಮಿಷ್ಟದ ಯಾವುದಾದರೂ ಹವ್ಯಾಸಕ್ಕೆ ಒಡ್ಡಿಕೊಳ್ಳಿ.

ಈಜು, ಆಟ, ಸ್ನೇಹಿತರೊಂದಿಗಿನ ಮಾತುಕತೆ, ಪೇಟಿಂಗ್ ಹೀಗೆ ನಿಮಗೆ ಇಷ್ಟವಾದ ಕೆಲಸದಲ್ಲಿ ತೊಡಗಿಕೊಳ್ಳಿ ಇದು ನಿಮಗೆ ಬೇಸರಿಸಿದ, ಅಸಮಧಾನ ಮೂಡಿಸಿದ ಯೋಚನೆಯಿಂದ ದೂರತಳ್ಳಲು ಸಹಾಯ ಮಾಡುತ್ತದೆ.  ಪ್ರತಿದಿನ ವ್ಯಾಯಾಮ ಅಥವಾ ಏರೋಬಿಕ್ಸ್ ಅಭ್ಯಾಸ ಮಾಡಿಕೊಳ್ಳಿ ಇದು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ.

ನಿಮ್ಮ ಮಾನಸಿಕ, ದೈಹಿಕ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಮುಖ್ಯವಾಗಿ ಅತಿಯಾಗಿ ಯಾವ ವಿಷಯಗಳಿಗೂ ಒತ್ತು ನೀಡಿ ಯೋಚಿಸಬೇಡಿ. ಅತಿ ಎನ್ನುವುದು ಎಂದಿಗೂ ಅಪಾಯವೇ. ಇದು ನಿಮ್ಮ ಮೆದುಳಿನ ಮೇಲೆಯೂ ಪರಿಣಾಮ ಬೀರಲಿದೆ.

ಲೈಫ್ ಈಸ್ ಬ್ಯೂಟಿಫುಲ್. ಅಂದುಕೊಂಡ ಹಾಗೇ ಎಲ್ಲವೂ  ನಡೆಯಬೇಕು ಎಂದಾಗಲ್ಲ. ಕೈಮೀರಿದ ಘಟನೆಗಳಿಗೂ ಹೊಂದಿಕೊಂಡಾಗ ಬದುಕು ಸುಂದರ ಎನಿಸುವುದು. ಹೀಗಾಗಿ ಸಣ್ಣ ಸಣ್ಣ ಕಿರಿಕಿರಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಅದರ ಬದಲು ಖುಷಿಯ ವಿಚಾರಗಳನ್ನು ಹುಡುಕಿ.

ಚಿಕ್ಕವರಿರುವಾಗ ರೂಡಿಸಿಕೊಂಡ ಅನೇಕ ಕೆಲಸಗಳು ನಮಗೆ ಖುಷಿ ನೀಡುತ್ತವೆ. ಅಂತಹ ಕೆಲಸಗಳೆಡೆಗೆ ಗಮನ ನೀಡಿ. ಆಗ ನಿಮ್ಮ ಮನಸ್ಸಿನ ದುಗುಡ, ಅಸಮಧಾನಕ್ಕೆ ಪೂರ್ಣವಿರಾಮ ಇಡಬಹುದು.

ಉದಾಹರಣೆಗೆ ಹಕ್ಕಿಗಳಿಗೆ ನೀರು, ಕಾಳುಗಳನ್ನು ಇಡುವುದು, ಗಿಡಗಳಿಗೆ ನೀರುಣಿಸುವುದು ಹೀಗೆ ಸಣ್ಣ ಸಣ್ಣ ಕೆಲಸದಲ್ಲೂ ಖುಷಿಯನ್ನು ಕಾಣಿ. ಇದು ನಿಮ್ಮ ಒತ್ತಡದ ಬದುಕಿಗೆ ಒಂದಷ್ಟು ಖುಷಿ ನೀಡುತ್ತದೆ.  ನೀವು ಕೆಲಸಕ್ಕೆ ಹೊರಗೆ ಹೋಗುವವರಾದರೆ ಬಿಡುವಿನ ವೇಳೆಯಲ್ಲಿ ಈ ಅಭ್ಯಾಸಗಳನ್ನು ರೂಡಿಸಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕ್ಕೆ ಶುಂಠಿ ಚಹಾ ಎಷ್ಟು ಪ್ರಯೋಜನ?