Select Your Language

Notifications

webdunia
webdunia
webdunia
webdunia

ಪ್ರತಿದಿನ ಒಂದು ಗ್ಲಾಸ್ ಬಿಸಿ ನೀರು ಕುಡಿಯಿರಿ

ಪ್ರತಿದಿನ ಒಂದು ಗ್ಲಾಸ್ ಬಿಸಿ ನೀರು ಕುಡಿಯಿರಿ
ಬೆಂಗಳೂರು , ಶನಿವಾರ, 15 ಜನವರಿ 2022 (15:26 IST)
ಮನುಷ್ಯನ ದೇಹದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಮುಕ್ಕಾಲು ಪಾಲು ನೀರಿನ ಅಂಶವೇ ತುಂಬಿಕೊಂಡಿದೆ.

ಆರೋಗ್ಯ ತಜ್ಞರು ಹೇಳುವ ಹಾಗೆ ಯಾವುದೇ ಸಂದರ್ಭದಲ್ಲಿ ಕೂಡ ದೇಹದಲ್ಲಿ ನೀರಿನ ಅಂಶದ ಕೊರತೆ ಎದುರಾಗಬಾರದು.

 
ಹೀಗಾಗಿ ಆರೋಗ್ಯ ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಪ್ರತಿದಿನ ಕನಿಷ್ಠ ಏಳರಿಂದ ಎಂಟು ಗ್ಲಾಸ್ ನೀರು ಕುಡಿಯಬೇಕು. ಇಲ್ಲಿ ಜನರಿಗೆ ಮತ್ತೊಂದು ಡೌಟ್ ಬರಬಹುದು. ಏನಂದರು ತಣ್ಣೀರು ಕುಡಿಯಬೇಕಾ ಅಥವಾ ಬಿಸಿನೀರು ಕುಡಿದರೆ ಒಳ್ಳೆಯದು.

ಯಾವಾಗ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳು ಕಡಿಮೆಯಾಗುತ್ತಾ ಬರುತ್ತದೆ, ಆಗ ನಮ್ಮ ಚರ್ಮ ನೋಡಲು ಹೊಳಪಿನಿಂದ ಮತ್ತು ಕಾಂತಿಯಿಂದ ಕೂಡಿರುತ್ತದೆ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದ ತಾಪಮಾನ ಹೆಚ್ಚಾಗುತ್ತದೆ ಮತ್ತು ನಿಮ್ಮ ದೇಹದಲ್ಲಿ ಬೆವರು ಬರಲು ಪ್ರಾರಂಭವಾಗುತ್ತದೆ.

ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದ ಜೀರ್ಣ ಶಕ್ತಿ ಹೆಚ್ಚುತ್ತದೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಕಾಪಾಡುವುದು ಮಾತ್ರವಲ್ಲದೆ ಹೊಳಪಿನಿಂದ ಹಾಗೂ ಕಾಂತಿಯಿಂದ ಕೂಡಿದ ಚರ್ಮ ನಿಮ್ಮದಾಗುವ ಹಾಗೆ ಮಾಡುತ್ತದೆ.

 ಚರ್ಮಕ್ಕೆ ಮಾಯಿಶ್ಚರೈಸರ್

ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹಕ್ಕೆ ನೀವು ನೀರಿನ ಅಂಶವನ್ನು ಒದಗಿಸುವ ಜೊತೆಗೆ ಚರ್ಮದ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುತ್ತೀರಿ. ಏಕೆಂದರೆ ಇದರಿಂದ ನಿಮ್ಮ ಚರ್ಮದ ಭಾಗದಲ್ಲಿ ಕಂಡುಬರುವ ರಕ್ತನಾಳಗಳಲ್ಲಿ ಅತ್ಯಧಿಕ ರಕ್ತಸಂಚಾರ ಉಂಟಾಗಿ ಚರ್ಮದ ಜೀವಕೋಶಗಳಿಗೆ ಪೌಷ್ಟಿಕ ಸತ್ವಗಳು ಸಿಗುತ್ತವೆ ಮತ್ತು ಆರೋಗ್ಯಕರವಾದ ಚರ್ಮ ನಿಮ್ಮದಾಗುವ ಹಾಗೆ ಮಾಡುತ್ತವೆ.

ಚರ್ಮದ ಪ್ರಕ್ರಿಯೆ

ಪ್ರತಿದಿನ ತಪ್ಪದೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ಚರ್ಮದ ತಾಜಾತನ ಹೆಚ್ಚುತ್ತದೆ. ನೋಡಲು ನೀವು ಸುಂದರವಾಗಿ ಮತ್ತು ಯೌವನಭರಿತರಾಗಿ ಕಾಣುವಿರಿ. ಇದಕ್ಕೆ ಪ್ರಮುಖ ಕಾರಣವೆಂದರೆ ಉಗುರು ಬೆಚ್ಚಗಿನ ನೀರು ನಿಮ್ಮ ಚರ್ಮದ ಭಾಗದಲ್ಲಿ ಕಂಡು ಬರುವ ಫ್ರೀ ರಾಡಿಕಲ್ ಅಂಶಗಳನ್ನು ಹೋಗಲಾಡಿಸುತ್ತದೆ.

ಸೋಂಕುಗಳ ವಿರುದ್ಧ ಹೋರಾಡುತ್ತದೆ

ಉಗುರು ಬೆಚ್ಚಗಿನ ನೀರು ನೈಸರ್ಗಿಕವಾಗಿ ನಿಮ್ಮ ಚರ್ಮಕ್ಕೆ ಹಾಗೂ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಅನುಕೂಲಕಾರಿ.

ದೇಹದಲ್ಲಿ ನೀರಿನ ಅಂಶ ಇಲ್ಲದೆ ಹೋದರೆ ಅದು ನಿಮಗೆ ಮಲಬದ್ಧತೆ ಸಮಸ್ಯೆಯನ್ನು ತಂದುಕೊಡಬಹುದು. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ. ಇದರಿಂದ ನಿಮ್ಮ ದೇಹದ ಒಳಭಾಗದ ಅಂಗಾಂಗಗಳು ಸಹ ಸ್ವಚ್ಛವಾಗುತ್ತವೆ.

ದೇಹದ ತೂಕ

ಉಗುರು ಬೆಚ್ಚಗಿನ ನೀರು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುವುದರ ಜೊತೆಗೆ ಚರ್ಮದ ಕೆಳಭಾಗದಲ್ಲಿ ಕಂಡು ಬರುವ ಅಡಿಪೋಸ್ ಅಂಗಾಂಶಗಳಿಗೆ ಕೂಡ ಅನುಕೂಲಕಾರಿಯಾಗಿ ಕೆಲಸ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲೇ ಮಾಡಿ ರುಚಿಕರವಾದ ಬಿಸ್ಕತ್ ಬರ್ಫಿ