Publish Date: Sun, 16 Sep 2018 (08:28 IST)
Updated Date: Sun, 16 Sep 2018 (08:30 IST)
ಬೆಂಗಳೂರು: ಯಶಸ್ವಿ ಲೈಂಗಿಕ ಜೀವನ ನಿಮ್ಮದಾಗಬೇಕಾದರೆ ಏನು ಮಾಡಬೇಕು? ಅಮೆರಿಕಾದ ಅಧ್ಯಯನಕಾರರ ಪ್ರಕಾರ ಲೈಂಗಿಕ ಜೀವನ ಯಶಸ್ವಿಯಾಗಬೇಕಾದರೆ ಎರಡು ವಿಚಾರಗಳು ಸರಿ ಇರಬೇಕು! ಅವು ಯಾವುವು?
ಲೈಂಗಿಕ ವಿಚಾರದಲ್ಲಿ ಸಂಗಾತಿಯಿಂದ ಒಬ್ಬ ವ್ಯಕ್ತಿ ಬಯಸುವುದು ಎರಡು ವಿಚಾರಗಳನ್ನು ಎಂದು ಅಮೆರಿಕಾ ಅಧ್ಯಯನಕಾರರು ಸುಮಾರು 5000 ಕ್ಕೂ ಹೆಚ್ಚು ಮಂದಿಯ ಸಮೀಕ್ಷೆ ನಡೆಸಿ ಅಭಿಪ್ರಾಯಪಟ್ಟಿದ್ದಾರೆ.
ಅವುಗಳೆಂದರೆ ತನ್ನ ಸಂಗಾತಿ ತನ್ನ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಮತ್ತು ಸಂಗಾತಿ ಎಷ್ಟು ಉತ್ಸುಕಳಾಗಿದ್ದಾರೆ ಎಂಬ ಬಗ್ಗೆ ಮಾತ್ರವಂತೆ. ಇನ್ನು ತನ್ನನ್ನು ಉದ್ರೆಕಗೊಳಿಸುವ ವಿಚಾರದ ಬಗ್ಗೆ ಜನರು ಅಷ್ಟೊಂದು ನಿರೀಕ್ಷೆಯಿಟ್ಟುಕೊಳ್ಳಲ್ಲ. ಮೇಲಿನ ಎರಡು ವಿಚಾರಗಳು ಸರಿಯಾಗಿದ್ದರೆ ಉಳಿದವುಗಳೆಲ್ಲಾ ತನ್ನಿಂದ ತಾನೇ ಆಗುತ್ತದೆ ಎಂಬುದು ಸಮೀಕ್ಷೆಯಲ್ಲಿ ಪಾಲ್ಗೊಂಡವರ ಅಭಿಪ್ರಾಯವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.