Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಈ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ

ಚಳಿಗಾಲದಲ್ಲಿ ಈ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ
ಬೆಂಗಳೂರು , ಶನಿವಾರ, 15 ಸೆಪ್ಟಂಬರ್ 2018 (16:01 IST)
ಬೆಂಗಳೂರು : ಚಳಿಗಾಲ ಇನ್ನೇನು ಆರಂಭವಾಗಲಿದೆ. ಈ ಸಮಯದಲ್ಲಿ ಆರೋಗ್ಯದ  ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಒಣ ಹಣ್ಣುಗಳು, ಬೀಜಗಳು, ತುಳಸಿ, ಶುಂಠಿ, ಸೊಪ್ಪು ತರಕಾರಿಗಳು ನಮ್ಮ ದಿನನಿತ್ಯದ ಆಹಾರದಲ್ಲಿ ಇದ್ದರೆ ಉತ್ತಮ. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು.


* ಚಳಿಗಾಲದಲ್ಲಿ ಹಾಲಿನ ಉತ್ಪನ್ನಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದು ಒಳಿತು. ನಮ್ಮ ದೇಹದಲ್ಲಿ ಕಫದ ಉತ್ಪತ್ತಿಯನ್ನು ಹೆಚ್ಚಿಸುವುದಲ್ಲದೆ ಈಗಾಗಲೇ ಇರುವ ಕಫವನ್ನು ಗಟ್ಟಿ ಮಾಡುತ್ತದೆ. ಇದರಿಂದ ಗಂಟಲಿನಲ್ಲಿ ತೀವ್ರ ಕೆರೆತ, ನೋವು ಉಂಟಾಗುತ್ತದೆ.


* ಚಳಿಗಾಲದಲ್ಲಿ ಪ್ರತಿಯೊಬ್ಬರೂ ಬಿಸಿಬಿಸಿ ಕಾಫಿ, ಟೀ ಅಥವಾ ಬಿಸಿ ಚಾಕಲೇಟ್ ಕುಡಿಯಲು ಬಯಸುತ್ತಾರೆ. ಆದರೆ ಅದರಲ್ಲಿರುವ ಕೊಬ್ಬು ಮತ್ತು ಕೆಫೀನ್ ಇರುತ್ತದೆ.. ಈ ಪಾನೀಯಗಳು ನಮ್ಮ ದೇಹವನ್ನು ಒಣಗಿಸುತ್ತವೆ. ಅಲ್ಲದೆ ದೇಹದಲ್ಲಿ ಕಫ ಉತ್ಪತ್ತಿ ಮಾಡುತ್ತದೆ. ಹೀಗಾಗಿ ಕೆಫೀನ್ ನ್ನು ಬಿಟ್ಟು ನೀರು ಅಥವಾ ಗಿಡಮೂಲಿಕೆಗಳ ಪಾನೀಯವನ್ನು ಕುಡಿದರೆ ಒಳ್ಳೆಯದು.


* ಮೊಟ್ಟೆ ಮತ್ತು ಮಾಂಸಗಳಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಗಳಿವೆ. ಹೆಚ್ಚು ಪ್ರೊಟೀನ್ ಗಳ ಸೇವನೆಯಿಂದ ಗಂಟಲಿನಲ್ಲಿ ಕಫ ಉತ್ಪತ್ತಿಯಾಗುತ್ತವೆ. ಸಂಸ್ಕರಿತ ಮಾಂಸಗಳು ಮತ್ತು ಅಧಿಕ ಕೊಬ್ಬಿನ ಮಾಂಸಗಳು ನಮ್ಮ ದೇಹಕ್ಕೆ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಮೀನು ಮತ್ತು ಕೋಳಿ ಮಾಂಸಗಳು ಇದಕ್ಕೆ ಹೋಲಿಸಿದರೆ ಸುರಕ್ಷಿತ. ಹೀಗಾಗಿ ಸಂಸ್ಕರಿತ ಮಾಂಸಗಳಿಗಿಂತ ಸಾವಯವ ಮಾಂಸ ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶೇವ್ ಮಾಡಿ ಅಂಡರ್ ಆರ್ಮ್ ಕಪ್ಪಗಾಗಿದೆಯೇ? ಹಾಗಿದ್ದರೆ ಈ ಟ್ರಿಕ್ ಬಳಸಿ