Webdunia - Bharat's app for daily news and videos

Install App

ಯಾವ ಹಣ್ಣುಗಳಿಂದ ಯಾವ್ಯಾವ ಆರೋಗ್ಯಕ್ಕೆ ಪ್ರಯೋಜನ

Webdunia
ಬುಧವಾರ, 13 ಫೆಬ್ರವರಿ 2019 (13:41 IST)
ಹಣ್ಣುಗಳು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ನಾನಾ ತರಹದ ಹಣ್ಣುಗಳು ನಾನಾ ರೀತಿಯ ಜೀವಸತ್ವ, ಪ್ರೋಟೀನ್, ಖನಿಜಾಂಶಗಳನ್ನು ಹೊಂದಿರುವುದಲ್ಲದೇ ಬಗೆಬಗೆಯ ರುಚಿಗಳನ್ನು ಹೊಂದಿರುತ್ತದೆ. ಅದರಲ್ಲಿಯೂ ಪ್ರಕೃತಿಯು ನಮಗೆ ವರದಾನವೇ ಸರಿಯ ಯಾವ ಯಾವ ಕಾಲಕ್ಕೆ ಯಾವ ಯಾವ ಹಣ್ಣುಗಳನ್ನು ಕೊಡಬೇಕೋ ಅದನ್ನೇ ನೀಡುತ್ತದೆ. ಆದರೂ ಸಾರ್ವಕಾಲಿಕವಾಗಿಯೂ ಕೆಲವು ಹಣ್ಣುಗಳನ್ನು ಸೇವಿಸಬಹುದು.

ಕಾಲ ಮೊದಲಿನ ಹಾಗೇ ಇಲ್ಲ. ಮನುಷ್ಯನ ಆಚಾರ-ವಿಚಾರಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇದೆ. ಹಾಗೆಯೇ ಬದಲಾದ ಆಹಾರ-ವಿಹಾರಗಳೂ ಸಹ ಇದಕ್ಕೆ ಹೊರತಾಗಿಲ್ಲ. ಕಲಬೆರಕೆಯ ವಸ್ತುಗಳನ್ನೇ ಸೇವಿಸುತ್ತಿರುವ ಈ ವಿದ್ಯಮಾನದಲ್ಲಿ ಹಣ್ಣುಗಳನ್ನು ತಾಜಾ ತಿನ್ನುವುದರಿಂದ ಸ್ವಲ್ಪ ಮಟ್ಟಿಗಾದರೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. 
 
ಇವೆಲ್ಲದರ ನಡುವೆ ನಾವು ಗಮನಿಸಬೇಕಾದ ಅಂಶವೇನೆಂದರೆ ಹಣ್ಣುಗಳನ್ನು ತಿನ್ನುವುದಕ್ಕೂ ಒಂದು ಕ್ರಮವಿದೆ. ಕೆಲವು ಹಣ್ಣುಗಳನ್ನು ಉಟಕ್ಕಿಂತ ಮುಚೆಯೇ ಸೇವಿಸುವುದು ಉತ್ತಮ. ಇನ್ನು ಕೆಲವು ಹಸಿದ ಹೊಟ್ಚೆಯಲ್ಲಿ ಸೇವಿಸಿದರೆ ಒಳ್ಳೆಯದು. ವೈದ್ಯರ ಪ್ರಕಾರ ಸಾಮಾನ್ಯವಾಗಿ ಹಣ್ಣುಗಳನ್ನು ಉಟವಾದ 3 ಗಂಟೆಯ ನಂತರ ಸೇವಿಸುವುದು ಉತ್ತಮವೆಂದು ಹೇಳುತ್ತಾರೆ. ಏಕೆಂದರೆ, ನಾವು ತಿಂದ ಆಹಾರ ಜಠರಕ್ಕೆ ಹೋದ ನಂತರ ಅದು ಕಿಣ್ವವಾಗಿ ಬದಲಾಗುತ್ತದೆ. ನಂತರ ಅದು ಆಮ್ಲವಾಗಿ ಬದಲಾಗಿ ಪಚನವಾಗಲು ಪ್ರಾರಂಭವಾಗುತ್ತದೆ. ಆದರೆ ಹಣ್ಣು ಹಾಗಲ್ಲ. ಅದು ಜಠರಕ್ಕೆ ಸೇರಿದ ತಕ್ಷಣವೇ ಪಚನವಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ನಾವು ಆಹಾರ ಮತ್ತು ಹಣ್ಣನ್ನು ಒಟ್ಟಿಗೇ ತಿಂದರೆ, ತಿಂದ ಆಹಾರ ಹಣ್ಣಿನ ಜೊತೆಗೆ ಪಚನವಾಗಲು ಪ್ರಾರಂಭವಾಗುತ್ತದೆ. ಕಿಣ್ವವಾಗದೆ, ಆಮ್ಲವಾಗಿ ಪರಿವರ್ತನೆ ಹೊಂದಲು ಹಣ್ಣು ಆಹಾರಕ್ಕೆ ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕಾಗಿಯೇ ಎಸಿಡಿಟಿಯಂತಹ ತೊಂದರೆಯೂ ಕಾಣಿಸಿಕೊಳ್ಳಬಹುದು. ಇದಲ್ಲದೇ ಹಣ್ಣನ್ನು ರಸದ ರೂಪದಲ್ಲಿಯೂ ಸೇವಿಸಬಹುದು. ಹಾಗಾದರೆ ಯಾವ್ಯಾವ ಹಣ್ಣುಗಳನ್ನು ತಿಂದರೆ ಏನೇನು ಪ್ರಯೋಜನ ಎಂದು ನೋಡೋಣ...
 
* ಸೇಬು: ದಿನಕ್ಕೆ ಒಂದು ಸೇಬಿ ಸೇವಿಸಿ ವೈದ್ಯರಿಂದ ದೂರವಿರಿ ಎಂಬ ಮಾತು ಪ್ರಚಲಿತದಲ್ಲಿದೆ. 100 ಗ್ರಾಂ ಸೇಬಿನ ಹಣ್ಣಿನಲ್ಲಿ 13.81 ಗ್ರಾಂನಷ್ಟು ಕಾರ್ಬೊಹೈಡ್ರೇಟ್ಸ್‌ ಹಾಗೂ 10.39 ಗ್ರಾಂನಷ್ಟು ಸಕ್ಕರೆ ಅಂಶ, 3.3 ಮಿಲಿಗ್ರಾಂನಷ್ಟು ಫ್ಲೋರೈಡ್‌, ಹಾಗು 85 % ನೀರಿನ ಅಂಶವಿರುತ್ತದೆ. ಆರೋಗ್ಯ ಪೂರ್ಣ ದೇಹದ ಬೆಳವಣಿಗೆಗೆ ಇದು ಉತ್ತಮವಾಗಿದೆ. ಅಷ್ಟೇ ಅಲ್ಲದೇ ದೊಡ್ಡಕರುಳಿನ ಕಾನ್ಸರ್‌ ತಡೆಯಲು ಸಹಕಾರಿ. ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ನ್ಯೂಟ್ರಿಷನ್‌ ಹಣ್ಣು ಸೇಬು. ದೇಹಕ್ಕೆ ಬೇಕಾಗಿರುವ ಉತ್ತಮ ಕೊಬ್ಬನ್ನೂ ಸಹ ಇದು ಒದಗಿಸುತ್ತದೆ.
 
* ಕಿತ್ತಳೆ ಹಣ್ಣು: ನಿಯಮಿತವಾಗಿ ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಅತಿಯಾದ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಈ ಹಣ್ಣಿನಲ್ಲಿರುವ ವಿಟಾಮಿನ್ ಸಿ ಅಂಶವು ಅಲ್ಸರ್ ಬರುವುದನ್ನು ತಡೆಯುತ್ತದೆ ಅಷ್ಟೇ ಅಲ್ಲದೇ ಸಂಶೋಧನೆಗಳ ಪ್ರಕಾರ ಕಿತ್ತಳೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ರೋಗ ಬರುವುದಿಲ್ಲ, 
 
* ಬಾಳೆಹಣ್ಣು: ಈ ಹಣ್ಣು ಸಾರ್ವಕಾಲಿಕವಾಗಿ ಸಿಗುವ ಹಣ್ಣಾಗಿದ್ದು, ಇದನ್ನು ಸೇವಿಸುವುದರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆ. ಇದು ಬೊಜ್ಜಿನ ಸಮಸ್ಯೆಯನ್ನು ನಿವಾರಿಸುತ್ತದೆ. ಆಮ್ಲೀಯತೆಯನ್ನು ತಗ್ಗಿಸುತ್ತದೆ. ಈ ಹಣ್ಣಿನಲ್ಲಿ ಕಬ್ಬಿಣದ ಅಂಶು ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ ರಕ್ತಹೀನತೆಯನ್ನು ನೀಗಿಸುತ್ತದೆ.ಅದಲ್ಲದೇ ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ ಅಲ್ಸರ್ ತೊಂದರೆಯನ್ನೂ ಸಹ ಶಮನಗೊಳಿಸುತ್ತದೆ.
 
* ಕಲ್ಲಂಗಡಿ ಹಣ್ಣು: ದೇಹದ ನಿರ್ಜಲೀಕರಣಕ್ಕೆ ಕಲ್ಲಂಗಡಿ ಹಣ್ಣು ರಾಮಬಾಣವಿದ್ದಂತೆ. ಈ ಹಣ್ಮಿನ ಬೀಜವೂ ಕೂಡಾ ಅರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಕಲ್ಲಂಗಡೆ ಹಣ್ಣು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನಲ್ಲಿರುವ ವಿಟಾಮಿನ್ ಎ ಇಂಶವು ಕಣ್ಣಿನ ಅರೋಗ್ಯಕ್ಕೆ ಉಪಯುಕ್ತವಾಗಿದೆ ಮತ್ತು ಇದನ್ನು ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲಾಗುವುದನ್ನೂ ಸಹ ತಡೆಯುತ್ತದೆ. ಈ ಹಣ್ಣಿನಲ್ಲಿ ಕಬ್ಬಿಣದಂಶ, ಮ್ಯಾಗ್ನೀಶಿಯಂ, ಕ್ಯಾಲ್ಸಿಯಂ, ಇರುವುದರಿಂದ ಇವುಗಳು ಮೂಳೆಯನ್ನು ಬಲವನ್ನಾಗಿಸುತ್ತದೆ. 
 
* ದಾಳಿಂಬೆ ಹಣ್ಣು: ಕವಿಶ್ರೇಷ್ಠರು ಸುಂದರವಾದ ದಂತಪಕ್ತಿಯನ್ನು ಈ ಹಣ್ಣಿಗೆ ಹೋಲಿಸಿದರೆ ಕುರಾನ್‌ನಲ್ಲಿ ಇದನ್ನು ಸ್ವರ್ಗಲೋಕದ ಹಣ್ಣು ಎಂದು ಪ್ರಸ್ಥಾಪಿಸಲಾಗಿದೆ. ಈ ಹಣ್ಣನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಗಂಟಲು ನೋವು ಮತ್ತು ಒಮ ಕೆಮ್ಮಿಗೆ ದಾಳಿಂಬೆ ಸಿಪ್ಪೆ ಒಳ್ಳೆಯ ಮನೆಮದ್ದು. ಅದಲ್ಲದೇ ಹೂವಿನ ಪರಾಗ, ಕೀಟಗಳ ಕಚ್ಚುವಿಕೆಯಿಂದಾಗುವ ಅಲರ್ಜಿಗೆ ದಾಳಿಂಬೆ ಹಣ್ಣು ರಾಮಬಾಣವಾಗಿದೆ. 
 
* ಪಪ್ಪಾಯಿ ಹಣ್ಣು: ಪಪ್ಪಾಯಿಯಲ್ಲಿ ಸಕ್ಕರೆ ಅಂಶವು ಶೇ. 8 ರಷ್ಟಿದ್ದು, ಮಧುಮೇಹದ ಖಾಯಿಲೆ ಇರುವವರೂ ಈ ಹಣ್ಣನ್ನು ಯಥೇಚ್ಛವಾಗಿ ಸೇವಿಸಬಹುದು. ಈ ಹಣ್ಣನ್ನು ಸಿಪ್ಪೆ ತೆಗೆದು ಕಾಳುಮೆಣಸಿನಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯುವುದರಿಂದ ಅಜೀರ್ಣವು ಕಡಿಮೆಯಾಗುತ್ತದೆ. ಡೆಂಗ್ಯೂನಂತಹ ಮಾರಣಾಂತಿಕ ರೋಗಗಳಿಗೂ ಪಪ್ಪಾಯಿ ಹಣ್ಣಿನ ಎಲೆಯು ಬಹಳ ಪ್ರಯೋಜನಕಾರಿಯಾಗಿದೆ. ಪಪ್ಪಾಯಿ ಜ್ಯೂಸ್‌ಗೆ ನೆನೆಸಿದ ಅಂಜೂರ ಮತ್ತು ದ್ರಾಕ್ಷಿಯನ್ನು ಹಾಕಿ ಕುಡಿಯುವುದರಿಂದ ಮಲಬದ್ಧತೆಯು ನಿವಾರಣೆಯಾಗುತ್ತದೆ. 
 
 ಹಣ್ಣುಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು. ಮಧ್ಯಂತರ ಬಿಡುವಿನಲ್ಲಿ ತಿಂದರೂ ಸರಿ ಇಲ್ಲವಾದರೆ ಬೆಳಿಗಿನ ಸಮಯದಲ್ಲಿ ತಿಂದರೂ ಸರಿ. ಒಟ್ಟಿನ್ಲಲಿ ಹಣ್ಣುಗಳ ಸೇವನೆಯ ಅಭ್ಯಾಸವು ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪತ್ರವನ್ನು ವಹಿಸುತ್ತವೆ. ಅದು ಮಧುಮೇಹಿಗಳೂ ಮತ್ತು ಡಯಟ್ ಮಾಡುತ್ತಿರುವ ಹೆಂಗಳೆಯರಿಗೂ ಸಹ ಒಳ್ಳೆಯದು. ಹಣ್ಣುಗಳನ್ನು ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದು. ಆದರೆ ಯಾವ ವಯಸ್ಸಿನಲ್ಲಿ ಯಾರ್ಯಾರು ಯಾವ್ಯಾವ ಸಮಯದಲ್ಲಿ ಯಾವ್ಯಾವ ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು ಎಂಬುದಕ್ಕೆ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ಸೇವಿಸುವುದರಿಂದ ಕೂದಲು ಹಣ್ಣಾಗುವುದು, ಬಕ್ಕತಲೆ, ವಿಪರೀತವಾಗಿ ಕೈ-ಕಾಲು ನಡುಗುವುದು ಮತ್ತು ಕಣ್ಣಿನ ಸುತ್ತ ಕಂಡುಬರುವ ಕಪ್ಪು ವರ್ತುಲಗಳು ಮುಂತಾದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಒಂದು ವೇಳೆ ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮವನ್ನು ಅನುಸರಿಸಿದಲ್ಲಿ, ದೀರ್ಘಾಯುಷ್ಯ, ಚೈತನ್ಯ, ಆರೋಗ್ಯ, ಸಂತೋಷ ಮತ್ತು ಸಾಮಾನ್ಯ ತೂಕವನ್ನು ಕಾಯ್ದುಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments