Webdunia - Bharat's app for daily news and videos

Install App

ಥೈರಾಯ್ಡ್ ಸಮಸ್ಯೆ ಇರುವವರು ಯಾವ ಆಹಾರ ಸೇವಿಸಬಹುದು?

Webdunia
ಬುಧವಾರ, 13 ಅಕ್ಟೋಬರ್ 2021 (13:14 IST)
ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾಗುವಂತೆ ಮಾಡುತ್ತದೆ ಅಥವಾ ಟಿಎಸ್ಹೆಚ್, ಟಿ3 ಮತ್ತು ಟಿ4 ಹಾರ್ಮೋನುಗಳ ಅಸಮತೋಲಿತ ಮಟ್ಟವನ್ನು ಉತ್ಪಾದಿಸುತ್ತವೆ. ಇದರಿಂದಾಗಿ ಆಹಾರ ಸೇವಿಸುವಾಗ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಸಾಮಾನ್ಯ ಮತ್ತು ಗಂಭೀರವಾದ ಥೈರಾಯ್ಡ್ ಸಮಸ್ಯೆಗಳಲ್ಲಿ ಹೈಪೋಥೈರಾಯ್ಡಿಸಮ್ ಕೂಡ ಒಂದು. ಈ ಸ್ಥಿತಿಯಲ್ಲಿ, ದೇಹವು ಸಾಕಷ್ಟು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸಲು ವಿಫಲವಾಗುತ್ತದೆ ಮತ್ತು ಇದು ವ್ಯಕ್ತಿಯ ದೈನಂದಿನ ಕಾರ್ಯಚಟುವಟಿಕೆ ಹಾಗೂ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಗೆ ಆರಂಭಿಕ ರೋಗಲಕ್ಷಣಗಳು ನಿರ್ಣಾಯಕವಾಗಿದೆ ಮತ್ತು ಅದಕ್ಕೆ ಸಮಗ್ರ ರೀತಿಯಲ್ಲಿ ಚಿಕಿತ್ಸೆ ನೀಡುವುದು ಅತ್ಯಗತ್ಯ. ಕೇವಲ ಔಷಧಿಯು ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ, ಆದ್ದರಿಂದ ವ್ಯಕ್ತಿಯ ಆಹಾರ ಕ್ರಮವು ಕೂಡ ಮುಖ್ಯವಾಗಿದೆ.
ಥೈರಾಯ್ಡ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನುಗಳು ಮೂಡ್ ಡಿಸಾರ್ಡರ್ಸ್, ತೂಕ ಬದಲಾವಣೆ, ಆಯಾಸದ ಮಟ್ಟ ಮತ್ತು ಚರ್ಮವನ್ನು ಆರೋಗ್ಯವಾಗಿಡಲು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಶಕ್ತಿಯ ಮಟ್ಟವನ್ನು ಹೆಚ್ಚಿಸುವ, ಹಾರ್ಮೋನ್ ಮಟ್ಟವನ್ನು ಹೆಚ್ಚಿಸುವ ಮತ್ತು ಕಾರ್ಯನಿರ್ವಹಣೆಯನ್ನು ಉಳಿಸಿಕೊಳ್ಳುವ ಆಹಾರವನ್ನು ಸೇವಿಸುವುದು ಸೂಕ್ತ.
ಥೈರಾಯ್ಡ್ ಸಮಸ್ಯೆಯಿಂದ ದೂರವಿರಲು ಆಹಾರವನ್ನು ಸೇವಿಸಿ
ಜನರು ವಿಟಮಿನ್ ಡಿ, ಸೆಲೆನಿಯಮ್, ಟೈರೋಸಿನ್ ಮತ್ತು ಸತು ಸೇರಿದಂತೆ ಪ್ರಮುಖವಾದ ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳನ್ನು ಸೇವಿಸುವತ್ತ ಗಮನ ಹರಿಸಬೇಕು. ಇವುಗಳು ಹೈಪೋಥೈರಾಯ್ಡಿಸಮ್ಗೆ ಸಂಬಂಧಿಸಿದ ಹಲವಾರು ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ನೀವು ಹೈಪೋಥೈರಾಯ್ಡಿಸಮ್ ಹೊಂದಿದ್ದರೆ, ಸೊಪ್ಪು, ತರಕಾರಿ, ದ್ವಿದಳ ಧಾನ್ಯಗಳನ್ನು ಸೇವಿಸಿ. ದ್ವಿದಳ ಧಾನ್ಯಗಳು ಬಿ-ಜೀವಸತ್ವಗಳು, ಸತು ಮತ್ತು ಅಮೈನೋ ಆಮ್ಲಗಳ ಸಮೃದ್ಧ ಮೂಲಗಳಾಗಿವೆ. ಗೆಣಸು, ಸೇಬು, ಕುಂಬಳಕಾಯಿ ಮತ್ತು ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪೋಷಕಾಂಶಗಳಿವೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ತೂಕ ಹೆಚ್ಚಾಗುವುದನ್ನು ನಿರ್ವಹಿಸಲು ಸಹಾಯ ಮಾಡುತ್ತವೆ.
ಆಹಾರ ಪದಾರ್ಥಗಳಿಂದ ದೂರವಿರಿ
ಜಂಕ್ ಫುಡ್, ಸಂಸ್ಕರಿಸಿದ ಆಹಾರ, ಕೊಬ್ಬು ತುಂಬಿದ ಆಹಾರಗಳನ್ನು ಸೇವಿಸಬೇಡಿ. ಥೈರಾಯ್ಡ್ ಸಮಸ್ಯೆ ಇರುವವರು ಸೋಯಾ ಬೀನ್, ಸೋಯಾ ಸಾಸ್‌ಗಳಂತಹ ಆಹಾರವನ್ನು ಕಡಿಮೆ ಮಾಡಬೇಕು ಅಥವಾ ತಪ್ಪಿಸಬೇಕು. ಹೂಕೋಸು, ಎಲೆಕೋಸು ಅನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments