Select Your Language

Notifications

webdunia
webdunia
webdunia
webdunia

ತೂಕ ಇಳಿಸಬೇಕೇ? ಈ ಉಪಾಯಗಳನ್ನು ಮಾಡಿ ನೋಡಿ

ತೂಕ ಇಳಿಸಬೇಕೇ? ಈ ಉಪಾಯಗಳನ್ನು ಮಾಡಿ ನೋಡಿ
Bangalore , ಶುಕ್ರವಾರ, 27 ಜನವರಿ 2017 (11:10 IST)
ಬೆಂಗಳೂರು: ಆಧುನಿಕ ಜೀವನ ಶೈಲಿಯಲ್ಲಿ ಎಲ್ಲರಿಗೂ ತೆಳ್ಳಗೆ, ಸ್ಲಿಮ್ ಆಗಿ ಕಾಣುವ ಬಯಕೆ. ಆದರೆ ಯಾರದ್ದೋ ಮಾತು ಕೇಳಿಕೊಂಡು ಏನಾದರೂ ಮಾಡಲು ಹೋಗಿ ಇನ್ನೇನೋ ಎಡವಟ್ಟಾಗುತ್ತದೆ. ಅದಕ್ಕೇ ಮನೆಯಲ್ಲೇ ಮಾಡಬಹುದಾದ ಸಿಂಪಲ್ ಉಪಾಯ ಹೇಳುತ್ತೇವೆ ನೋಡಿಕೊಳ್ಳಿ.

 
ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ ಹಾಕಿದ ಹದ ಬಿಸಿ ನೀರು ಕುಡಿಯಿರಿ. ಇದರಿಂದ ದೇಹದ ಜೀರ್ಣಕ್ರಿಯೆ ಸುಗಮವಾಗುವುದಲ್ಲದೆ, ದೇಹ ನಿರ್ಜಲೀಕರಣವಾಗದಂತೆ ತಡೆಯಬಹುದು.

ನಿಮಗೆ ಗೊತ್ತಾ? ತೆಂಗಿನ ಕಾಯಿ ಒಡೆದ ಮೇಲೆ ನೀರು ಚೆಲ್ಲುತ್ತೀರಲ್ಲಾ? ಆ ನೀರನ್ನು ಚೆಲ್ಲದೇ ಖಾಲಿ ಹೊಟ್ಟೆಯಲ್ಲಿ ಕುಡಿದರೆ ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡುತ್ತದೆ ಮಾತ್ರವಲ್ಲ, ದೇಹಕ್ಕೆ ಅಗತ್ಯವಾದ ಪೋಷಕಾಂಶ ಒದಗಿಸುತ್ತದೆ. ಈ ತೆಂಗಿನ ಕಾಯಿಯ ನೀರು ದೇಹದಲ್ಲಿರುವ ಅನಗತ್ಯ ಕೊಬ್ಬು ಕರಗಿಸುತ್ತದೆ.

ಮಜ್ಜಿಗೆ ಕುಡಿಯುವುದೂ ಉತ್ತಮ ಪರಿಹಾರ. ಇದು ಜೀರ್ಣ ಪ್ರಕ್ರಿಯೆಯನ್ನು ಚುರುಕುಗೊಳಿಸುವುದಲ್ಲದೆ, ದೇಹದಲ್ಲಿ ಕೊಬ್ಬು ಉತ್ಪನ್ನವಾಗಲು ಕಾರಣವಾಗುವ ಅಂಶಗಳನ್ನು ನಾಶ ಮಾಡುತ್ತದೆ. ಇಷ್ಟು ಸಿಂಪಲ್ ಸ್ಟೆಪ್ ನ್ನು ಮನೆಯಲ್ಲೇ ಮಾಡಿ ನೋಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರುಚಿ ರುಚಿ ಶ್ಯಾವಿಗೆ ಹಲ್ವಾ ಮಾಡುವ ವಿಧಾನ