Publish Date: Thu, 26 Jan 2017 (11:48 IST)
Updated Date: Thu, 26 Jan 2017 (11:52 IST)
ಬೆಂಗಳೂರು: ಪಾಯಸ ಮಾಡುವ ಶ್ಯಾವಿಗೆ ಬಳಸಿ ಹಲ್ವಾ ಮಾಡಬಹುದು. ಸ್ವಲ್ಪ ವೈವಿದ್ಯಮಯ ಸಿಹಿ ತಿನಿಸು ಮಾಡಬೇಕೆಂದರೆ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು
ಶ್ಯಾವಿಗೆ
ಸಕ್ಕರೆ
ತುಪ್ಪ
ಏಲಕ್ಕಿ
ಗೋಡಂಬಿ
ದ್ರಾಕ್ಷಿ
ಮಾಡುವ ವಿಧಾನ
ಶ್ಯಾವಿಗೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ನಂತರ ಸ್ವಲ್ಪ ಹಾಲು ಹಾಕಿ ಬೇಯಿಸಿಕೊಳ್ಳಿ. ಪಾಯಸಕ್ಕೆ ಹಾಕುವಷ್ಟು ಹಾಕುವ ಅಗತ್ಯವಿಲ್ಲ. ಶ್ಯಾವಿಗೆ ಬೆಂದ ಮೇಲೆ ಸಕ್ಕರೆ ಹಾಕಿ. ನಂತರ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕಿ ಚೆನ್ನಾಗಿ ತಿರುವಿ. ಗಟ್ಟಿಯಾಗುತ್ತಾ ಬಂದಂತೆ ಮತ್ತಷ್ಟು ತುಪ್ಪ, ಏಲಕ್ಕಿ ಪುಡಿ, ದ್ರಾಕ್ಷಿ ಗೋಡಂಬಿ ಹಾಕಿ ಉರಿ ನಿಲ್ಲಿಸಿ. ತುಪ್ಪ ಸವರಿದ ಬಟ್ಟಲಿಗೆ ಇದನ್ನು ಸುರುವಿಕೊಂಡು ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ತಿನ್ನಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ