Publish Date: Mon, 19 Apr 2021 (06:54 IST)
Updated Date: Mon, 19 Apr 2021 (06:55 IST)
ಬೆಂಗಳೂರು : ನೆತ್ತಿಯ ಚರ್ಮದಲ್ಲಿ ಬೆವರು, ಧೂಳು, ಕೊಳೆಯಿಂದ ಶಿಲೀಂಧ್ರ ಸೋಂಕು ಉಂಟಾಗುತ್ತದೆ. ಇದರಿಂದ ತಲೆಯಲ್ಲಿ ತುರಿಕೆ, ತಲೆಹೊಟ್ಟು ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
*ಬೇವು : ಇದು ವಿವಿಧ ಸೋಂಕುಗಳನ್ನು ನಿವಾರಿಸುತ್ತದೆ. ಇದನ್ನು ಬಳಸಿ ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಬಹುದು. ಹಾಗಾಗಿ ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ಅದರಲ್ಲಿ ನಿಂಬೆ ರಸ ಮತ್ತು ಸ್ವಲ್ಪ ಅರಶಿನ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ಪ್ರತಿವಾರ ಮಾಡಿ.
*ಆ್ಯಪಲ್ ಸೈಡರ್ ವಿನೆಗರ್ : ಇದು ಶಿಲೀಂಧ್ರ ಸೋಂಕನ್ನು ನಿವಾರಿಸಲು ಬಹಳ ಸಹಕಾರಿಯಾಗಿದೆ. ಆ್ಯಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ತಲೆಯ ಮೇಲೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ. ಬಳಿಕ ಶಾಂಪೂ ಬಳಸಿ ವಾಶ್ ಮಾಡಿ.