Publish Date: Thu, 11 Feb 2021 (06:45 IST)
Updated Date: Thu, 11 Feb 2021 (06:47 IST)
ಬೆಂಗಳೂರು : ಅರಶಿನ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ರೋಗಗಳನ್ನು ನಿವಾರಿಸಬಹುದು. ಅದೇರೀತಿ ಇದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು. ಅದಕ್ಕಾಗಿ ಈ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ.
1 ಚಮಚ ಅರಶಿನ, 1 ಚಮಚ ಆಲಿವ್ ಆಯಿಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಬಳಿಕ ಮುಖಕ್ಕೆ ಮಸಾಜ್ ಮಾಡಿ. 30 ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ವಾರಕ್ಕೆ 2 ಬಾರಿ ಬಳಸಿ. ಇದರಿಂದ ಮೊಡವೆ, ಅಲರ್ಜಿ, ಸುಕ್ಕುಗಳು, ಮುಂತಾದ ಸೌಂದರ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ.