Select Your Language

Notifications

webdunia
webdunia
webdunia
webdunia

ಮಧುಮೇಹ ಬಾರದಂತೆ ತಡೆಯಲು ಈ ಉಪಾಯ ಮಾಡಿ

ಮಧುಮೇಹ ಬಾರದಂತೆ ತಡೆಯಲು ಈ ಉಪಾಯ ಮಾಡಿ
ಬೆಂಗಳೂರು , ಶುಕ್ರವಾರ, 16 ನವೆಂಬರ್ 2018 (08:51 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಧುಮೇಹ ಎನ್ನುವುದು ಸೈಲೆಂಟ್ ಆಗಿ ಪ್ರಾಣ ತಿನ್ನುವ ಖಾಯಿಲೆಯಾಗಿ ಪರಿಣಮಿಸುತ್ತಿದೆ. ಇದನ್ನು ಬಾರದಂತೆ ತಡೆಯಲು ಈ ಮುನ್ನಚ್ಚರಿಕೆ ಮಾಡಿ.

ವ್ಯಾಯಾಮ
ದೇಹಕ್ಕೆ ವ್ಯಾಯಾಮ ನೀಡುವುದು ಎಲ್ಲಾ ರೀತಿಯಿಂದಲೂ ಉತ್ತಮ. ದೈಹಿಕ ಕಸರತ್ತು ಮಾಡುವುದರಿಂದ ದೇಹದಲ್ಲಿ ಗ್ಲುಕೋಸ್ ಅಂಶ ಕಡಿಮೆಯಾಗುತ್ತದೆ.

ನಾರಿನಂಶದ ಆಹಾರ
ಅಧಿಕ ಪಿಷ್ಟ ಇರುವ ಆಹಾರವನ್ನು ನಿಲ್ಲಿಸಿ, ನಾರಿನಂಶ ಹೇರಳವಾಗಿರುವ ಆಹಾರಗಳನ್ನು ಸೇವಿಸಿ. ತಾಜಾ ಹಣ್ಣು, ತರಕಾರಿ, ಬೀನ್ಸ್, ಇಡೀ ಧಾನ್ಯ, ಒಣ ಹಣ್ಣು, ಬೀಜಗಳನ್ನು ಆದಷ್ಟು ಸೇವಿಸಿ. ಆದಷ್ಟು ಸಂಸ್ಕರಿತ ಆಹಾರ, ಸಕ್ಕರೆ, ಉಪ್ಪು, ಕೊಬ್ಬು ಅಧಿಕವಿರುವ ಆಹಾರಗಳನ್ನು ಅವಾಯ್ಡ್ ಮಾಡಿ.

ತೂಕ ಕಡಿಮೆ ಮಾಡಿ
ವಿಪರೀತ ಬೊಜ್ಜು ಬೆಳೆದಿದ್ದರೆ ತೂಕ ಕಡಿಮೆ ಮಾಡುವುದರತ್ತ ಗಮನಹರಿಸಿ. ಇದರಿಂದ ಮಧುಮೇಹ ಮಾತ್ರವಲ್ಲ, ಹಲವು ಇತರ ಗಂಭೀರ ಖಾಯಿಲೆಗಳಿಂದಲೂ ದೂರವಿರಬಹುದು.

ಧೂಮಪಾನ ಬೇಡ
ಧೂಮಪಾನ ಮಾಡುವವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎಂದು ಹಲವು ಅಧ್ಯಯನ ವರದಿಗಳೇ ಹೇಳಿವೆ. ಹಾಗಾಗಿ ಈ ಕೆಟ್ಟ ಚಟದಿಂದ ದೂರವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ದೇಹದಲ್ಲಿ ಈ ಬದಲಾವಣೆ ಆಗುತ್ತಿದ್ದರೆ ಹುಷಾರಾಗಿ!