Select Your Language

Notifications

webdunia
webdunia
webdunia
webdunia

ಕುತ್ತಿಗೆ ನೋವು ಕಾಣಿಸಿಕೊಂಡರೆ ಮನೆಯಲ್ಲಿ ಈ ರೀತಿಯಾದ ಆರೈಕೆಗಳನ್ನು ಮಾಡಿ ನೋಡಿ

ಕುತ್ತಿಗೆ ನೋವು ಕಾಣಿಸಿಕೊಂಡರೆ ಮನೆಯಲ್ಲಿ ಈ ರೀತಿಯಾದ ಆರೈಕೆಗಳನ್ನು ಮಾಡಿ ನೋಡಿ
ಬೆಂಗಳೂರು , ಬುಧವಾರ, 31 ಜನವರಿ 2018 (06:45 IST)
ಬೆಂಗಳೂರು : ಕುತ್ತಿಗೆ ಸಂಕೀರ್ಣವಾದ ರಚನೆಯನ್ನು ಹೊಂದಿದೆ. ಇದರ ವ್ಯಾಪಕವಾದ ಚಲನಶೀಲತೆ ನಮ್ಮ ದೇಹದ ಅತ್ಯಗತ್ಯ ಭಾಗವಾಗಿದೆ. ಕುತ್ತಿಗೆ ನೋವು ಉಂಟಾದಾಗ ನಮ್ಮ ತಲೆಯನ್ನು ಯಾವುದೇ ದಿಕ್ಕಿನಲ್ಲಿ ಚಲಿಸಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಕುತ್ತಿಗೆ ನೋವು ಪದೇಪದೇ ಕಾಣಿಸಿಕೊಂಡರೆ ಮನೆಯಲ್ಲಿ  ಆರೈಕೆಗಳನ್ನು ಮಾಡಬಹುದು.  


ಐಸ್ ಪ್ಯಾಕ್:  ಕುತ್ತಿಗೆ ನೋವು ಐಸ್ ಪ್ಯಾಕ್ ಉರಿಯೂತವನ್ನು ತಗ್ಗಿಸಲು ಮತ್ತು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಟವೆಲ್ ಅಲ್ಲಿ ಕೆಲವು ಐಸ್ ಘನಗಳು ಇರಿಸಿ ಮತ್ತು ಅದನ್ನು ಸರಿಯಾಗಿ ಕಟ್ಟಿಕೊಳ್ಳಿ. ಪ್ರತಿ ಎರಡು ಮೂರು ಗಂಟೆಗೊಮ್ಮೆ ಕಾಲ 15 ನಿಮಿಷಗಳ ಕಾಲ ಅದನ್ನು ನಿಮ್ಮ ಕುತ್ತಿಗೆಗೆ ಅನ್ವಯಿಸಿ.


ಎಪ್ಸಮ್ ಉಪ್ಪು:  . ಎಪ್ಸಮ್ ಉಪ್ಪು ಒತ್ತಡವನ್ನು ತಗ್ಗಿಸಲು ಮತ್ತು ತ್ವರಿತವಾದ ನೋವು ನಿವಾರಣೆಗೆ ಸಹಾಯ ಮಾಡತ್ತದೆ. ಎಪ್ಸಮ್ ಸಲ್ಫೇಟ್ ನೈಸರ್ಗಿಕ ಸ್ನಾಯುಗಳ ವಿಶ್ರಾಂತಿಕಾರಕವಾಗಿ ಕಾರ್ಯನಿರ್ವಹಿಸುವ ಮೆಗ್ನೀಸಿಯಮ್ ಲವಣಗಳನ್ನು ಹೊಂದಿರುತ್ತದೆ. ಇದು ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಬೆಚ್ಚಗಿನ ಸ್ನಾನಕ್ಕೆ 2 ಕಪ್ ಎಪ್ಸಮ್ ಉಪ್ಪನ್ನು ಸೇರಿಸಿ. 15-20 ನಿಮಿಷಗಳ ಕಾಲ ನೀರಿನಲ್ಲಿ ಕುತ್ತಿಗೆ ಪ್ರದೇಶವನ್ನು ನೆನೆಸಿ. ನೋವು ನಿವಾರಣೆ ಹೊಂದುವ ತನಕ ಈ ಪ್ರಕ್ರಿಯೆಯನ್ನು ಮುಂದುವರಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿ ಲೈಂಗಿಕ ಸಂಬಂಧ ಬೆಳೆಸುವವರಿಗೆ ಇಲ್ಲಿದೆ ಟಿಪ್ಸ್!