Daily Horoscope
✕

ಉದ್ದ ಕೂದಲು ಪಡೆಯಲು ಹೀಗೆ ಮಾಡಿ

Webdunia
ಗುರುವಾರ, 23 ಜೂನ್ 2016 (12:14 IST)
ಕೆಲವರಿಗೆ ಉದ್ದ ಕೂದಲು ಬೆಳೆಸಿಕೊಳ್ಳಬೇಕೆಂಬ ಬಯಕೆ ಇರುತ್ತೆ. ತಮ್ಮ ಈ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಒದ್ದಾಡುತ್ತಿರುತ್ತಾರೆ. ನಿಮಗೂ ಉದ್ದ ಕೂದಲು ಬೆಳೆಸಿಕೊಳ್ಳಬೇಕೆಂಬ ಆಸೆ ಇದೆಯೇ? ಹೀಗೆ ಮಾಡಿ.

1. ದಿನಕ್ಕೆ ಎರಡು - ಮೂರು ಬಾರಿ ಕೂದಲನ್ನು  ಬಾಚಿ.
 
2. ಕೂದಲನ್ನು ಬಾಚುವುದರಿಂದ ತಲೆಗೆ ಮಸಾಜ್ ದೊರೆತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುವುದು. 
 
3. ಕೆಲವರು ತಲೆಗೆ ಎಣ್ಣೆಯನ್ನೇ ಹಚ್ಚುವುದಿಲ್ಲ. ಇದು ನಿಜಕ್ಕೂ ಕೂದಲಿನ ಆರೋಗ್ಯಕ್ಕೆ ಕಂಟಕ. ವಾರಕ್ಕೆ 3-4 ಬಾರಿಯಾದರೂ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ. ರಾತ್ರಿ ಎಣ್ಣೆ ಹಾಕಿ ಮಸಾಜ್ ಮಾಡಿ ಬೆಳಿಗ್ಗೆ ಸ್ನಾನ ಮಾಡುವುದು ಉತ್ತಮ.
 
4.ಮಲಗುವಾಗ ಕೂದಲನ್ನು ಬಿಟ್ಟುಕೊಂಡು ಮಲಗಬೇಡಿ. ಇದರಿಂದ ಕೂದಲು ಸಿಕ್ಕಾಗುತ್ತದೆ. ಮಲಗುವ ಮುನ್ನ ಸಡಿಲವಾದ ಜಡೆ ಹಾಕಿ ಕೂದಲನ್ನು ಕಟ್ಟಿ. 
 
5. ದಾಸವಾಳವನ್ನು ಎಣ್ಣೆಗೆ ಹಾಕಿ ಕುದಿಸಿ, ಕೂದಲಿಗೆ ಹಚ್ಚಿ.
 
6. ಬಾದಾಮಿ ಎಣ್ಣೆ, ನೆಲ್ಲಿಕಾಯಿ ಎಣ್ಣೆ ಕೂದಲು ಬೆಳೆಯಲು ಸಹಕಾರಿ .
 
7. ಅತಿ ಬಿಸಿ ನೀರಿನಿಂದ ಕೂದಲು ತೊಳೆಯಬೇಡಿ. ಉಗುರು ಬೆಚ್ಚಗಿನ ಅಥವಾ ತಣ್ಣಗಿನ ನೀರಿನಿಂದ ಕೂದಲು ತೊಳೆಯಿರಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ತುಟಿ ಒಡೆಯುವುದು ಯಾಕೆ, ಬೆಸ್ಟ್ ಮನೆ ಮದ್ದು

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಮುಂದಿನ ಸುದ್ದಿ
Show comments