Publish Date: Fri, 23 Feb 2018 (06:55 IST)
Updated Date: Fri, 23 Feb 2018 (06:58 IST)
ಬೆಂಗಳೂರು : ತರಕಾರಿಗಳನ್ನು ಫ್ರಿಜ್ ನಲ್ಲಿಟ್ಟರೆ ಅದು ಫ್ರೆಶ್ ಆಗಿರುತ್ತದೆ ನಿಜ. ಆದರೆ ಮನೆಯಲ್ಲಿ ಫ್ರಿಜ್ ಇಲ್ಲದಿದ್ದ ಸಮಯದಲ್ಲಿ ತರಕಾರಿ ಹೊರಗಡೆ ಇಡುವುದರಿಂದ ಅದು ಒಣಗಿ ಹೋಗುತ್ತದೆ. ಒಣಗಿದ ತರಕಾರಿಯಿಂದ ಮಾಡಿದ ಅಡುಗೆ ರುಚಿ ಕೂಡ ಇರುವುದಿಲ್ಲ. ಅದಕ್ಕಾಗಿ ಒಣಗಿದ ತರಕಾರಿಗಳನ್ನು ತಾಜಾಗೊಳಿಸಲು ಇಲ್ಲಿದೆ ಸುಲಭ ಉಪಾಯ.
ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ನೀರಿಗೆ ಸ್ವಲ್ಪ ಕಲ್ಲುಪ್ಪು ಹಾಕಿ. ಅದಕ್ಕೆ ತರಕಾರಿಗಳನ್ನು ಹಾಕಿ ರಾತ್ರಿ ಪೂರಾ ನೆನೆಸಿದರೆ ಬೆಳಗ್ಗೆ ತರಕಾರಿ ತಾಜವಾಗಿ ಮಿನುಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ