Publish Date: Fri, 23 Feb 2018 (06:47 IST)
Updated Date: Fri, 23 Feb 2018 (06:50 IST)
ಬೆಂಗಳೂರು : ಬಂಜೆತನವು ಮಹಿಳೆಯರನ್ನು ಮಾತ್ರ ಕಾಡುತ್ತದೆ ಎಂಬುದು ತಪ್ಪುಕಲ್ಪನೆ. ಪುರುಷರಲ್ಲಿಯೂ ಬಂಜೆತನದ ಸಮಸ್ಯೆ ಕಾಡುತ್ತದೆ. ಹಾಗೇ ಪುರುಷರ ಬಂಜೆತನಕ್ಕೆ ಬೊಜ್ಜು ಕೂಡ ಒಂದು ಕಾರಣವಾಗಬಲ್ಲುದು.
ತಜ್ಞರ ಪ್ರಕಾರ ಬಂಜೆತನವಿರುವ ದಂಪತಿಯಲ್ಲಿ ಶೇ.೪೦- ೪೫ರಷ್ಟು ಸಮಸ್ಯೆಯು ಪುರುಷರಲ್ಲಿ ಕಂಡುಬರುತ್ತದೆ. ಪುರುಷರ ಪ್ರಜನನ ಸಾಮರ್ಥ್ಯವನ್ನು ಬೊಜ್ಜು ಹಲವು ರೀತಿಯಲ್ಲಿ ಬಾಧಿಸುತ್ತದೆ. ಇದು ದೈಹಿಕ ವಂಶವಾಹಿ ಸಂಬಂಧಿತ ಅಥವಾ ಹಾರ್ಮೋನು ಸಮಸ್ಯೆಯ ರೂಪದಲ್ಲಿ ಕಾಡಬಹುದು. ದೈಹಿಕವಾಗಿ ಇದು ನಿಮಿರುವಿಕೆ ದೌರ್ಬಲ್ಯ ಸಮಸ್ಯೆ ಅಥವಾ ಸ್ಖಲನ ದೌರ್ಬಲ್ಯ ಸಮಸ್ಯೆಯ ಮೂಲಕ ಬಂಜೆತನಕ್ಕೆ ಕಾರಣವಾಗಬಹುದು. ಬೊಜ್ಜುತನದಿಂದ ಒತ್ತಡಕ್ಕೆ ಒಳಗಾಗುವ ಪುರುಷರಲ್ಲಿ ವಿರ್ಯಾದ ಗುಣಮಟ್ಟವೂ ಕಳಪೆಯಾಗಬಹುದು. ಅಲ್ಲದೆ, ಹಾರ್ಮೋನಿನ ಅಸಮತೋಲನ (ಕಡಿಮೆಯಾದ ಟೆಸ್ಟೊಸ್ಟೆರಾನ್ ಮತ್ತು ಅತಿಯಾದ ಈಸ್ಟ್ರಾಡಿಯೋಲ್) ಉಂಟುಮಾಡಿ ಲೈಂಗಿಕ ಬಯಕೆಯನ್ನು ಕುಂಠಿತಗೊಳಿಸಬಹುದು. ಬೊಜ್ಜಿನಿಂದಾಗಿ ಗಂಡಸರಲ್ಲಿ ಅತಿಯಾದ ರಕ್ತದೊತ್ತಡ, ಮಧುಮೇಹ, ಕೊಲೆಸ್ಟೆರಾಲ್, ಹೃದಯದ ಸಮಸ್ಯೆ ಉಂಟಾಗಿ ಅವೂ ಬಂಜೆತನಕ್ಕೆ ಕಾರಣವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ