Publish Date: Sat, 17 Nov 2018 (09:26 IST)
Updated Date: Sat, 17 Nov 2018 (09:28 IST)
ಬೆಂಗಳೂರು: ಹೆಚ್ಚಿನ ಸಂದರ್ಭದಲ್ಲಿ ಹಾಸಿಗೆ ಕಂಡರೆ ಹೊದಿಕೆ ಹೊದ್ದು ಮಲಗೋಣವೆನಿಸುತ್ತಿದೆಯೇ? ಸೆಕ್ಸ್ ಬೇಡವೆನಿಸಲು ಹಲವು ವಿಚಾರಗಳು ಕಾರಣವಾಗಬಹುದು. ಅವು ಯಾವುವು ನೋಡೋಣ.
ಸುಸ್ತು
ದಿನವಿಡೀ ಕೆಲಸ ಮಾಡಿದ ಮೇಲೆ ರಾತ್ರಿ ಸುಸ್ತಾಗಿ ಸೆಕ್ಸ್ ಗೆ ಮೂಡ್ ಬರದು. ಇಂತಹ ಸಂದರ್ಭದಲ್ಲಿ ನಿಮ್ಮ ಲೈಂಗಿಕ ಬಯಕೆಯೂ ಕಡಿಮೆಯಾಗಿರುತ್ತದೆ.
ಮದ್ಯಪಾನ
ಮದ್ಯಪಾನದಂತಹ ಮಾದಕ ವಸ್ತುಗಳ ಸೇವನೆಯಿಂದ ನಿಮ್ಮ ಮೇಲೆ ನೀವೇ ನಿಯಂತ್ರಣ ಕಳೆದುಕೊಳ್ಳುತ್ತೀರಿ. ಇಂತಹ ಸಂದರ್ಭದಲ್ಲಿ ಲೈಂಗಿಕ ಕಾಮನೆಯಿದ್ದರೂ ನೀವು ಸುಮಧುರ ಸೆಕ್ಸ್ ನಡೆಸಲು ಸಾಧ‍್ಯವಿಲ್ಲ.
ಸಂಗಾತಿ ಜತೆ ಕಿರಿ ಕಿರಿ
ಸಂಗಾತಿ ಜತೆ ಸಣ್ಣದೊಂದು ಮನಸ್ತಾಪವಾದರೂ ಮೂಡ್ ಹಾಳಾಗುತ್ತದೆ. ಅದೇ ಯೋಚನೆ ತಲೆಯಲ್ಲಿ ಕೊರೆಯುತ್ತಿದ್ದರೆ ರೊಮ್ಯಾನ್ಸ್ ಕಡೆಗೆ ಮನಸ್ಸು ವಾಲದು.
ಒತ್ತಡ
ಕೆಲಸದ ಒತ್ತಡ, ಅಥವಾ ಯಾವುದೋ ಒಂದು ವಿಚಾರ ನಿಮ್ಮ ಮನಸ್ಸನ್ನು ಕೊರೆಯುತ್ತಿದ್ದರೆ, ರೊಮ್ಯಾನ್ಸ್ ಮಾಡಬೇಕೆನಿಸದು.
ಮೊಬೈಲ್
ಮೊಬೈಲ್ ನಂತಹ ಆಧುನಿಕ ಗ್ಯಾಜೆಟ್ ಗಳು ನಿಮ್ಮ ದೈಹಿಕ ಸುಖವನ್ನು ಕಸಿದುಕೊಳ್ಳುತ್ತದೆ. ಇದು ಸೆಕ್ಸ್ ಗೆ ಪರ್ಯಾಯವಾದ ಖುಷಿ ನಿಮಗೆ ಕೊಡುತ್ತಿದ್ದರೆ ರೊಮ್ಯಾನ್ಸ್ ಮಾಡುವುದರ ಬಗ್ಗೆ ಯೋಚನೆ ಮಾಡಲಾರಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.