Webdunia - Bharat's app for daily news and videos

Install App

ಈ ಜ್ಯೂಸ್ ಕುಡಿಯೋದ್ರಿಂದ ಪ್ರಯೋಜನ

Webdunia
ಭಾನುವಾರ, 10 ಅಕ್ಟೋಬರ್ 2021 (10:11 IST)
ಆರೋಗ್ಯವಂತ ವ್ಯಕ್ತಿಯ ದೇಹದ ಕೊಬ್ಬಿನಂಶ 15 ರಿಂದ 20 ರಷ್ಟು ಇರಬೇಕು. ಜನರು ಮನಸ್ಸಿಗೆ ಬಂದ ಆಹಾರ ಸೇವನೆ ಮಾಡ್ತಾರೆ. ಆದರೆ ಅದನ್ನು ಅರಗಿಸಿಕೊಳ್ಳಲು ಬೇಕಾಗುವಷ್ಟು ಶ್ರಮ ಅಥವಾ ಚಟುವಟಿಕೆ ಮಾಡುವುದಿಲ್ಲ. ಹೀಗಾಗಿ ದೇಹದಲ್ಲಿ ಕೊಬ್ಬು ಉತ್ಪಾದನೆಯಾಗುತ್ತದೆ.
Photo Courtesy: Google

ಅತಿಯಾದ ಕೊಬ್ಬು ದೇಹವನ್ನು ಹಾಳುಮಾಡುವುದಲ್ಲದೆ, ಮಧುಮೇಹ, ಹೃದ್ರೋಗದಂತಹ ಅನೇಕ ರೋಗಗಳು ಬರಲು ಪ್ರಮುಖ ಕಾರಣವಾಗುತ್ತದೆ. ಒಮ್ಮೆ ಹೆಚ್ಚಾದ ಕೊಬ್ಬನ್ನು ಕರಗಿಸಲು ಬಹಳ ಶ್ರಮ ಪಡಬೇಕಾಗುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಸುಲಭ ವಿಧಾನ.
ದೈನಂದಿನ ಡಯಟ್ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೊದಲು ಕ್ಯಾರೆಟ್, ಶುಂಠಿಯ ಸಿಪ್ಪೆ ತೆಗೆದು ನಂತರ 2 ಟೊಮೆಟೊ, 2 ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಶುಂಠಿಯನ್ನು ಮಿಕ್ಸ್ ಮಾಡಬೇಕು. ಅದನ್ನು ಒಂದು ಗ್ಲಾಸಿಗೆ ಹಾಕಿಕೊಳ್ಳಬೇಕು.
ರುಚಿಗೆ ತಕ್ಕಂತೆ ನಿಂಬೆ ರಸ, ಕಲ್ಲುಪ್ಪು ಹಾಕಿ ಪಾನೀಯ ರೆಡಿ ಮಾಡಿಕೊಳ್ಳಿ. ಜೀರಿಗೆಯನ್ನು ಹುರಿದು ನುಣ್ಣಗೆ ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿ. ಈ ಪಾನೀಯವನ್ನು ಬೆಳಗಿನ ತಿಂಡಿ ಅಥವಾ ಊಟದ ಜೊತೆ ಸೇವಿಸಬಹುದು. ಈ ಪಾನೀಯವನ್ನು ಅಗತ್ಯವಿದ್ದಾಗ ಮಾತ್ರ ಮಾಡಿ, ಮುಂಚಿತವಾಗಿ ಮಾಡಿಟ್ಟುಕೊಳ್ಳುವುದು ಬೇಡ.

ಟೊಮೆಟೊದಲ್ಲಿ ಫೈಬರ್ ಇದ್ದು, ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಕಾರ್ನಿಟೈನ್ ಎಂಬ ಅಮೈನೋ ಆಸಿಡ್ ಕೂಡ ಇದ್ದು, ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಕರುಳನ್ನು ಆರೋಗ್ಯವಾಗಿರಿಸುತ್ತದೆ.
ಪ್ರತಿ ದಿನ ಇದರ ಸೇವನೆ ಬೇಸರ ಎನಿಸಿದರೆ ಕೇವಲ ತರಕಾರಿಗಳನ್ನು ಕತ್ತರಿಸಿ ಉಪ್ಪು ಲಿಂಬು ಹಾಕಿ ತಿನ್ನಿ. ಆದರೆ ಈ ಆಹಾರ ಸೇವಿಸಿದ್ರೆ ಮಾತ್ರ ತೂಕ ಕಡಿಮೆಯಾಗುವುದಿಲ್ಲ. ಜಂಕ್ ಫುಡ್ ಮತ್ತು ಕೊಬ್ಬಿನಾಂಶ ಹೆಚ್ಚಿರುವ ಆಹಾರದ ಬಳಕೆ ಆದಷ್ಟು ಕಡಿಮೆ ಮಾಡಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments