Select Your Language

Notifications

webdunia
webdunia
webdunia
webdunia

ಸೌತೆಕಾಯಿ ಜ್ಯೂಸ್ ಯಾಕೆ ಸೇವಿಸಬೇಕು ಗೊತ್ತಾ?

ಸೌತೆಕಾಯಿ ಜ್ಯೂಸ್ ಯಾಕೆ ಸೇವಿಸಬೇಕು ಗೊತ್ತಾ?
ನವದೆಹಲಿ , ಸೋಮವಾರ, 16 ಮೇ 2016 (16:25 IST)
ಸೌತೆಕಾಯಿಯನ್ನು ತಿನ್ನಲು ಯಾರು ಇಷ್ಟಪಡುವುದಿಲ್ಲ ಹೇಳಿ? ವರ್ಷಪೂರ್ತಿ ಕಡಿಮೆ ದರದಲ್ಲಿ ದೊರೆಯುವದಲ್ಲದೇ ಸತ್ವಯುತವಾಗಿರುತ್ತದೆ. ಸೌತೆಕಾಯಿಯಲ್ಲಿ ನೀರಿನ ಅಂಶ, ವಿಟಮಿನ್ ಕೆ, ಸಿಲಿಕಾ, ವಿಟಮಿನ್ ಎ ,ವಿಟಮಿನ್ ಸಿ ಮತ್ತು ಕ್ಲೋರೋಫಿಲ್ ಎನ್ನುವ ಅಂಶವಿರುತ್ತದೆ.
 
ಸೌತೆಕಾಯಿ ಜ್ಯೂಸ್ ಪ್ರತಿನಿತ್ಯ ಕುಡಿಯುವುದು ಆರೋಗ್ಯಕರವಾಗಿರುವುದಲ್ಲದೇ ಕಿಡ್ನಿಸ್ಟೋನ್‌ ನಿವಾರಣೆಗೆ ರಾಮಬಾಣವಾಗಿದೆ.
 
ಪ್ರತಿನಿತ್ಯ ಒಂದು ಗ್ಲಾಸ್ ಸೌತೆಕಾಯಿ ಜ್ಯೂಸ್ ಸೇವನೆಯಿಂದ ನಿಮ್ಮ ದೇಹದಲ್ಲಿ ವಿಷಕಾರಿ ವಸ್ತುಗಳು ಹೊರಹೊಗಲು ನೆರವಾಗುತ್ತದೆ.
 
ಪ್ರತಿನಿತ್ಯ ಒಂದು ಗ್ಲಾಸ್ ಸೌತೆಕಾಯಿ ಜ್ಯೂಸ್ ಸೇವಿಸುವುದರಿಂದ ಕ್ಯಾನ್ಸರ್ ರೋಗದಿಂದ ಮುಕ್ತವಾಗಬಹುದಾಗಿದೆ.
 
ದೇಹದ ಭಾರದಿಂದ ಬಳಲುತ್ತಿರುವವರು ಸೌತೆಕಾಯಿ ಜ್ಯೂಸ್ ಸೇವಿಸುವುದರಿಂದ ತಮ್ಮ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಸೌತೆಕಾಯಿಯಲ್ಲಿ ಲೋ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶವಿರುವುದರಿಂದ ಹೆಚ್ಚುವರಿ ಬೊಜ್ಜು ನಿವಾರಣೆಗೆ ಸಹಕಾರಿಯಾಗುತ್ತದೆ.
 
ಸೌತೆಕಾಯಿ ಜ್ಯೂಸ್ ಸೇವಿಸುವುದರಿಂದ ಪಚನ ಕ್ರಿಯೆ ಸುಲಭವಾಗುತ್ತದೆ.
 
ಸೌತೆಕಾಯಿಯಲ್ಲಿ ಸಕ್ಕರೆ, ಬಿ ವಿಟಮಿನ್, ಎಲೆಕ್ಟ್ರೋಲೈಟ್ಸ್ ಇರುವುದರಿಂದ ಹ್ಯಾಂಗೋವರ್ ಡ್ರಿಂಕ್ಸ್‌ನಿಂದ ಬಳಲುತ್ತಿರುವರಿಗೆ ನಿರಾಳತೆ ನೀಡುತ್ತದೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಿತ್ತಲೆ- ದ್ರಾಕ್ಷಿ ಸಂಯೋಗದಿಂದ ಅಚ್ಚರಿಯ ಆರೋಗ್ಯ ಅನುಕೂಲಗಳು