Select Your Language

Notifications

webdunia
webdunia
webdunia
webdunia

ಕಿತ್ತಲೆ- ದ್ರಾಕ್ಷಿ ಸಂಯೋಗದಿಂದ ಅಚ್ಚರಿಯ ಆರೋಗ್ಯ ಅನುಕೂಲಗಳು

ಕಿತ್ತಲೆ- ದ್ರಾಕ್ಷಿ ಸಂಯೋಗದಿಂದ ಅಚ್ಚರಿಯ ಆರೋಗ್ಯ ಅನುಕೂಲಗಳು
ನವದೆಹಲಿ , ಶನಿವಾರ, 14 ಮೇ 2016 (12:14 IST)
ದ್ರಾಕ್ಷಿಗಳು ಮತ್ತು ಕಿತ್ತಲೆಗಳು ಸಮೃದ್ಧ ಪೌಷ್ಠಿಕಾಂಶಗಳು ಮತ್ತು ಅಧಿಕ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಕೂಡಿದೆ. ಇತ್ತೀಚೆಗೆ ವಾರ್ವಿಕ್ ವಿವಿಯ ಸಂಶೋಧಕರು ಕೆಂಪು ದ್ರಾಕ್ಷಿ ಮತ್ತು ಕಿತ್ತಲೆಗಳ ಮಿಶ್ರಣವು ಸ್ಥೂಲಕಾಯತೆ, ಮಧುಮೇಹ ಮತ್ತು ಹೃದಯರೋಗಳನ್ನು ನಿವಾರಿಸುತ್ತದೆ ಎಂದು ಹೇಳಿದ್ದಾರೆ. 
 
 
ಟ್ರಾನ್ಸ್ ರಿಸರ್ವರಾಟೋಲ್ ದ್ರಾಕ್ಷಿಯಲ್ಲಿ ಮತ್ತು ಕಿತ್ತಲೆಯಲ್ಲಿ ಹೆಸ್ಪೆರೆಟಿನ್ ಎರಡು ರಾಸಾಯನಿಕ ಸಂಯುಕ್ತಗಳ ಸಂಯೋಗವನ್ನು ಮಾತ್ರೆಯ ರೂಪದಲ್ಲಿ ಸೇವಿಸುವುದರಿಂದ ಮಾರಣಾಂತಿಕ ಕಾಯಿಲೆಗಳಿಗೆ ಬ್ರೇಕ್ ಹಾಕುತ್ತದೆ.
 
 ಎರಡು ಸಂಯುಕ್ತಗಳನ್ನು ಒಟ್ಟಿಗೆ ಪ್ರಯೋಗಿಸಿದಾಗ ಅವು ಗಮನಾರ್ಹವಾಗಿ ರಕ್ತದ ಸಕ್ಕರೆ ಅಂಶವನ್ನು ತಗ್ಗಿಸಿತು, ಇನ್ಸುಲಿನ್ ಮಟ್ಟವನ್ನು ಸುಧಾರಿಸಿತು ಮತ್ತು ರಕ್ತನಾಳಗಳ ಆರೋಗ್ಯವನ್ನು ಸುಧಾರಿಸಿತು.  ಮಧುಮೇಹ ಮತ್ತು ಹೃದಯರೋಗ ಚಿಕಿತ್ಸೆಗೆ ಇದು ನೆರವಾಗುವುದಲ್ಲದೇ ಸ್ಥೂಲಕಾಯದ ಟೈಬಾಂಬ್ ಅನ್ನು ನಿಷ್ಕ್ರಿಯಗೊಳಿಸುತ್ತದೆ.
 
ಡಯಾಬಿಟಿಸ್ ಪತ್ರಿಕೆಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದ್ದು, ಈ ಸಂಯುಕ್ತಗಳು ದೇಹದಲ್ಲಿ ಗ್ಲಯೋಕ್ಸಾಲೇಸ್ 1 ಎಂಬ ಪ್ರೋಟೀನ್ ಹೆಚ್ಚಿಸುತ್ತದೆ ಮತ್ತು ಮೀಥೈಲ್‌ಗ್ಲಯೋಕ್ಸಾಲ್ ಎಂದು ಕರೆಯುವ ಸಕ್ಕರೆ ಉತ್ಪಾದಿಸುವ ಹಾನಿಕರ ಸಂಯುಕ್ತವನ್ನು ತಟಸ್ಥಗೊಳಿಸುತ್ತದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಉದ್ದ ಕೂದಲು ಪಡೆಯಲು ಹೀಗೆ ಮಾಡಿ