ಬಾಲ್ಯದಿಂದಲೇ ಜೀವನದಲ್ಲಿ ಶಿಸ್ತು ಪಾಲಿಸಿದರೆ ಅದು ಜೀವನ ಪರ್ಯಾಂತ ಅವರ ಗುಣನಡತೆಯನ್ನು ಎತ್ತಿತೋರಿಸುತ್ತದೆ. ಹೀಗಾಗಿ ಪೋಷಕರು ಮಕ್ಕಳನ್ನು ಬೆಳೆಸುವಾಗ ತುಂಬಾನೇ ಜಾಗರೂಕತೆಯಿಂದ ಇರಬೇಕಾಗುತ್ತದೆ.
ಆರಂಭದಲ್ಲಿ ಕಲಿತ ಶಿಸ್ತು, ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಿಕೊಡುತ್ತದೆ. ಮಕ್ಕಳಲ್ಲಿ ಶಿಸ್ತನ್ನು ಅಳವಡಿಸುವ ಪ್ರಯತ್ನದಲ್ಲಿ, ಪೋಷಕರು ಕಟ್ಟುನಿಟ್ಟಾಗಿರುತ್ತಾರೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಮಾನಸಿಕ ಆಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನಿಮ್ಮ ಮಗುವನ್ನು ಕಟ್ಟುನಿಟ್ಟಾಗಿರದೆ ಅವರನ್ನು ಹೇಗೇ ಶಿಸ್ತುಬದ್ಧವಾಗಿ ಬೆಳೆಸಬೇಕೆಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.
ಧನಾತ್ಮಕ ನಡವಳಿಕೆ: ತಪ್ಪು ಮಾಡಿದಾಗ ಪೋಷಕರು ಸ್ಟ್ರಿಕ್ಟ್ ಆಗಿದ್ದರೆ ಅದು ಅವರ ಮನಸ್ಸಿಗೆ ತುಂಬಾ ಆಘಾತವನ್ನು ತಂದೊಡ್ಡುವ ಸಾಧ್ಯತೆಯಿದೆ. ಅದರ ಬದಲು ಧನಾತ್ಮಕವಾಗಿ ಅವರಿಗೆ ತಿಳಿಸಿದರೆ, ಅವರು ತಿದ್ದುಕೊಂಡು, ಮುಂದೆ ಆ ತಪ್ಪು ಆಗದಂತೆ ನಡೆದುಕೊಳ್ಳುತ್ತಾರೆ.
ಉಡುಗೊರೆ ನೀಡಿ: ಕೆಲವೊಂದು ಬಾರೀ ಮಕ್ಕಳು ತಪ್ಪು ಮಾಡಿದ್ಮೇಲೆ ಅವರು ನಿಮ್ಮ ಮಾತನ್ನು ಕೇಳಿದಾಗ ಅವರನ್ನು ಹುರಿದುಂಬಿಸಿ. ಮುಂದೆ ಈ ತಪ್ಪು ಮಾಡದಿದ್ದರೆ ಉಡುಗೊರೆ ನೀಡುವುದಾಗಿ ಪ್ರೋತ್ಸಾಹಿಸಿ.
ತಾರ್ಕಿಕ ಶಿಕ್ಷೆ: ಮಕ್ಕಳಿಗೆ ಅತಿಯಾದ ಶಿಕ್ಷೆ ನೀಡುವುದು ಸರಿಯಾದ ಕ್ರಮವಲ್ಲ. ಯಾಕೆಂದರೆ ಆ ತಪ್ಪು ನಡೆಸಿಕೊಳ್ಳದಂತೆ ನಾವು ಅವರಿಗೆ ತಿಳಿಸಿಕೊಡುವುದು ತುಂಬಾನೇ ಮುಖ್ಯ. ಆದರೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೀವು ಅವರನ್ನು ತಾರ್ಕಿಕವಾಗಿ ಶಿಕ್ಷಿಸಬೇಕು. ಉದಾಹರಣೆಗೆ, ಮನೆಕೆಲಸವನ್ನು ಮುಗಿಸಿದ ಬಳಿಕ ಆಟಕ್ಕೆ ಅನುಮತಿ ನೀಡುವುದು.
ಹೀಗೇ ಮಾಡಿವುದರಿಂದ ಮಕ್ಕಳಲ್ಲಿ ಶಿಸ್ತು ಅವಳವಡಿಕೆಯಾಗುತ್ತದೆ.