Publish Date: Thu, 30 May 2019 (09:04 IST)
Updated Date: Thu, 30 May 2019 (09:06 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮದುವೆ, ವಿಚ್ಛೇದನ ಎನ್ನುವುದು ಕಾಮನ್ ಆಗಿಬಿಟ್ಟಿದೆ. ಮಹಿಳೆಯರೂ ಸರ್ವ ಸ್ವತಂತ್ರರಾಗಿರುವುದರಿಂದ ವಿಚ್ಛೇದನದ ನಂತರ ವಿಚಲಿತರಾಗುವ ಪ್ರಮೇಯವೇ ಇರುವುದಿಲ್ಲ.
ಆದರೆ ಅಧ್ಯಯನವೊಂದರ ಪ್ರಕಾರ ಇಂಗ್ಲೆಂಡ್ ನಲ್ಲಿ ಈ ರೀತಿ ವಿಚ್ಛೇದನಕ್ಕೆ ಪ್ರಮುಖ ಕಾರಣ ವಿಡಿಯೋ ಗೇಮ್ ಎಂದು ತಿಳಿದುಬಂದಿದೆ. ವಿಡಿಯೋ ಗೇಮ್ ನಿಂದಾಗಿಯೇ ಹಲವು ದಂಪತಿಗಳು ದಾಂಪತ್ಯಕ್ಕೆ ಗುಡ್ ಬೈ ಹೇಳಿದ್ದಾರಂತೆ.
ವಿಡಿಯೋ ಗೇಮ್, ಪೋರ್ನ್ ಸೈಟ್ ಗಳಿಗೆ ಜನ ಹೆಚ್ಚು ಮರುಳಾಗುತ್ತಿರುವುದರಿಂದ ದಾಂಪತ್ಯದಲ್ಲಿ ಆಸಕ್ತಿಯೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಅಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಾಗುತ್ತಿವೆ ಎಂದು ತಿಳಿದುಬಂದಿದೆ.