Publish Date: Sat, 01 Jun 2019 (06:45 IST)
Updated Date: Sat, 01 Jun 2019 (06:47 IST)
ಬೆಂಗಳೂರು : ಲೈಂಗಿಕ ಕ್ರಿಯೆಯ ವೇಳೆ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಗಂಡುಮಕ್ಕಳಿಗೂ ಸಮಸ್ಯೆ ಎದುರಾಗುತ್ತದೆ. ಆ ವೇಳೆ ದುಸ್ಸಾಹಸಕ್ಕೆ ಕೈ ಹಾಕಿದರಂತೂ ಅಪಾಯ ಎದುರಾಗುವ ಸಂಭವವಿದೆಯಂದು ವೈದ್ಯರು ಹೇಳುತ್ತಾರೆ.
ಯುವಕರು ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸುವಾಗ ಶಿಶ್ನದಲ್ಲಿ ಬ್ಲೀಡ್ ಆಗುತ್ತದೆ. ಪುರುಷರ ಶಿಶ್ನ ಮುಂದೊಲಗಿನ ಚರ್ಮ ವೃಷಣ ಕೋಶದವರೆಗೂ ಹಬ್ಬಿರುತ್ತದೆ. ಯಾವಾಗ ಇದರ ಮೇಲೆ ಒತ್ತಡ ಹೆಚ್ಚಾಗುತ್ತದೋ, ಆಗ ಇದು ಹರಿಯುವ ಸಾಧ್ಯತೆ ಇರುತ್ತದೆ. ಇಲ್ಲವೇ ಮೂತ್ರ ಕೋಶ ಉರಿ ಅಥವಾ ಅಲರ್ಜಿಯಾದರೂ ಶಿಶ್ನದಲ್ಲಿ ರಕ್ತ ಒಸರುತ್ತದೆ. ಅತ್ಯಂತ ಸೂಕ್ಷ್ಮ ಚರ್ಮ ಹರಿದಾಗ ರಕ್ತ ಸ್ರಾವ ಕಾಣಿಸಿಕೊಳ್ಳುತ್ತದೆ.
ಆ ವೇಳೆ 6 ವಾರಗಳ ಕಾಲ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು. ಅಲ್ಲದೇ ಲೈಂಗಿಕ ಕ್ರಿಯೆ ವೇಳೆ ಅವಸರ ಒಳ್ಳೆಯದಲ್ಲ. ಸಾವಧಾನವಾಗಿ ಮುಂದುವರಿದರೂ ಇಬ್ಬರಿಗೂ ಒಳಿತು. ಶಿಶ್ನ ಅಥವಾ ಯೋನಿ ಒಣಗಿದ್ದರೆ ಲೂಬ್ರಿಕೆಂಟ್ ಬಳಸಬೇಕು. ಕಾಂಡೋಮ್ ಬಳಸುವುದು ಸೂಕ್ತ.