Webdunia - Bharat's app for daily news and videos

Install App

ಈ ಎಣ್ಣೆಗಳಲ್ಲಿದೆ ಕೂದಲಿನ ಆರೋಗ್ಯದ ಗುಟ್ಟು - ನೀವು ಟ್ರೈ ಮಾಡಿ

Webdunia
ಗುರುವಾರ, 26 ಆಗಸ್ಟ್ 2021 (07:24 IST)
Hair Oil: ನಿಮ್ಮ ಕೂದಲು ಮತ್ತು ನೆತ್ತಿಯನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಎಣ್ಣೆಯಿಂದ ಮಸಾಜ್ ಮಾಡುವುದು ನೆತ್ತಿಗೆ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ, ಇದು  ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ನಮ್ಮ ಕೂದಲಿನ ಹೊಳಪನ್ನು ಹೆಚ್ಚು ಮಾಡಲು ಮತ್ತು ಕೂದಲು ದಪ್ಪವಾಗಿ ಬೆಳೆಯಲು ಏನು ಮಾಡಬೇಕು ಎಂಬ ಯೋಚನೆ ಬಂದಾಗ ಭಾರತೀಯರು ಹೇರ್ ಆಯಿಲ್ಗಳನ್ನು ಅವಲಂಬಿಸುತ್ತಾರೆ. ನಮ್ಮ ಕೂದಲಿನ ಸೌಂದರ್ಯವನ್ನು ಕಾಪಾಡಲು ಹೇರ್ ಆಯಿಲ್ಗಳು ಒಳ್ಳೆಯ ಪರಿಹಾರ. ಈ ಎಣ್ಣೆಗಳಲ್ಲಿರುವ ಗಿಡಮೂಲಿಕೆಯ ಅಂಶಗಳು ಕೂದಲಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಕೂದಲಿನ ಹಲವು ಸಮಸ್ಯೆಗಳಾದ ಕೂದಲು ಉದುರುವುದು, ಸೀಳು ಬೀಳುವುದು ಹಾಗೂ ತಲೆ ಹೊಟ್ಟಿನ ಸಮಸ್ಯೆಗೆ ಸಹ ಇದು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.
ಹೇರ್ ಆಯಿಲ್ ಬಳಕೆಯಿಂದ ಆಗುವ ಪ್ರಯೋಜನಗಳು
ನಿಮ್ಮ ಕೂದಲು ಮತ್ತು ನೆತ್ತಿಯನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಎಣ್ಣೆಯಿಂದ ಮಸಾಜ್ ಮಾಡುವುದು ನೆತ್ತಿಗೆ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ, ಇದು  ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ನೀವು ಹೊಳೆಯುವ, ಮೃದುವಾದ ಕೂದಲು ಬೇಕು ಎಂದು ಬಯಸಿದರೆ,  ನೆತ್ತಿಯ ಮೇಲೆ ಸ್ವಲ್ಪ ಎಣ್ಣೆಯನ್ನು  ಹಚ್ಚಿ, ರಾತ್ರಿಯಿಡಿ ಬಿಡಿ ಮತ್ತು ಮರುದಿನ ಬೆಳಿಗ್ಗೆ  ತಲೆ ಸ್ನಾನ ಮಾಡಿ.ನಿಮ್ಮ ನೆತ್ತಿಗೆ ಮತ್ತು ಕೂದಲಿಗೆ ಎಣ್ಣೆ ಹಚ್ಚುವುದು  ಕೂದಲಿನ ಬೇರುಗಳನ್ನು ಪೋಷಿಸಲು ಮತ್ತು ಕೂದಲು ಉದುರುವುದನ್ನ ತಡೆಯುತ್ತದೆ. ಅದರಲ್ಲೂ ನಿಮಗೆ ಒತ್ತಡವಿದ್ದಾಗ ತಲೆಗೆ ಎಣ್ಣೆ ಮಸಾಜ್ ಮಾಡುವುದು ಒಳ್ಳೆಯದು.
ತೆಂಗಿನ ಎಣ್ಣೆ

ತಾಜಾ ತೆಂಗಿನ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಮೆಗಾ -3 ಇದ್ದು ಅದು ಚರ್ಮ ಮತ್ತು ಕೂದಲಿಗೆ ಸುಲಭವಾಗಿ  ಹೊಂದುತ್ತದೆ. ಇದು ಸ್ಯಾಚುರೇಟೆಡ್ ಕೊಬ್ಬುಗಳು, ವಿಟಮಿನ್ ಇ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ.  ಅದು ಕೂದಲುಗಳನ್ನು ಬಲಪಡಿಸುತ್ತದೆ.  ನೆತ್ತಿ ಮತ್ತು ಕೂದಲಿಗೆ ಮಸಾಜ್ ಮಾಡಿ. ಅರ್ಧ ಗಂಟೆಯ ನಂತರ ತಲೆ ಸ್ನಾನ ಮಾಡಿ. ಒಣ ನೆತ್ತಿ ಮತ್ತು ಒಣ ಕೂದಲು ಹೊಂದಿರುವವರು ನಿಮ್ಮ ಕೂದಲು ಮತ್ತು ಬೇರುಗಳಿಗೆ ಹಚ್ಚಿ ಕನಿಷ್ಠ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಿಮ್ಮ ಕೂದಲು ಒರಟಾಗಿದ್ದರೆ ಮತ್ತು ನಿಮ್ಮ ನೆತ್ತಿಯು ತುಂಬಾ ಒಣಗಿದ್ದರೆ ನೀವು ಇದನ್ನು ರಾತ್ರಿಯಿಡೀ ಇಡಬಹುದು.
ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಎ, ಬಿ ಮತ್ತು ಇ, ಕೊಬ್ಬಿನಾಮ್ಲಗಳು, ಪ್ರೋಟೀನ್ಗಳು,  ಆ್ಯಂಟಿ ಆಕ್ಸಿಡೆಂಟ್ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳನ್ನು ಹೊಂದಿದ್ದು ಅದು ದುರ್ಬಲ ಕೂದಲುಗಳನ್ನು ಬಲಪಡಿಸುತ್ತದೆ. ಇದು ಬೇರುಗಳಿಗೆ ರಕ್ತಪರಿಚಲನೆಯನ್ನು ಉತ್ತೇಜಿಸಿ ಮತ್ತು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.  ಈ ಎಣ್ಣೆಯನ್ನು ರಾತ್ರಿಯಿಡೀ ಬಿಡಬಹುದು. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಅದನ್ನು ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ರಾತ್ರಿಯಿಡಿ ಬಿಡಿ, ಮತ್ತು ಬೆಳಿಗ್ಗೆ ತಲೆ ಸ್ನಾನ ಮಾಡಿ.
ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ , ವಿಟಮಿನ್ ಇ ಮತ್ತು ಕೆ, ಮತ್ತು ಒಮೆಗಾ -3 ಮತ್ತು 6 ಕೊಬ್ಬಿನಾಮ್ಲಗಳು  ಇದ್ದು ಇದು ಕೂದಲಿಗೆ ಆಗುವ ಹಾನಿಯನ್ನು ತಡೆಯುತ್ತದೆ. ಇದು ಕಂಡೀಷನಿಂಗ್ ಗುಣಗಳನ್ನು ಹೊಂದಿದೆ. ಇದು ಸ್ಟೈಲಿಂಗ್ ಟೂಲ್ ಗಳಿಂದ ಉಂಟಾಗುವ ಹಾನಿಯಿಂದ ಕೂದಲನ್ನು ರಕ್ಷಿಸುತ್ತದೆ.  ಈ ಎಣ್ಣೆಯನ್ನು ವಾರಕ್ಕೊಮ್ಮೆ ಆಳವಾದ ಕಂಡೀಷನಿಂಗ್ ಚಿಕಿತ್ಸೆಯಾಗಿ ಬಳಸಿ. ನಿಮ್ಮ ನೆತ್ತಿ ಮತ್ತು ಕೂದಲಿಗೆ ಆಲಿವ್ ಎಣ್ಣೆಯನ್ನು ಹಚ್ಚಿ  ಮಸಾಜ್ ಮಾಡಿ. ಅರ್ಧ ಘಂಟೆಯವರೆಗೆ ಇರಿಸಿ ಮತ್ತು ಚೆನ್ನಾಗಿ ತೊಳೆಯಿರಿ. ನೀವು ಈ ಎಣ್ಣೆಯೊಂದಿಗೆ ನಿಂಬೆ ರಸವನ್ನು  ಸೇರಿಸಿದರೆ ತಲೆಹೊಟ್ಟು ಸಮಸ್ಯೆ ಪರಿಹಾರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ
Show comments