Webdunia - Bharat's app for daily news and videos

Install App

ಕಣ್ಣ ರೆಪ್ಪೆಯ ಕೆಳಭಾಗದಲ್ಲಿ ಆಗುವ ಗುಳ್ಳೆಗಳನ್ನು ಒಡೆದುಕೊಂಡರೆ ಅಪಾಯವಂತೆ

Webdunia
ಸೋಮವಾರ, 19 ನವೆಂಬರ್ 2018 (12:35 IST)
ಬೆಂಗಳೂರು : ಕೆಲವರಿಗೆ ಕಣ್ಣಿನ ರೆಪ್ಪೆಯ ಕೆಳಭಾಗದಲ್ಲಿ ಗುಳ್ಳೆಗಳಾಗುತ್ತದೆ. ಆದರೆ ಈ ಗುಳ್ಳೆಗಳನ್ನು ಯಾವುದೇ ಕಾರಣಕ್ಕೂ ಒಡೆದುಕೊಳ್ಳಬಾರದಂತೆ. ಒಂದು ವೇಳೆ ಹೀಗೆ ಮಾಡಿದರೆ ತುಂಬಾ ಅಪಾಯವಂತೆ.


ಹೌದು. ಈ ಗುಳ್ಳೆಗಳನ್ನು ಇತರೆ ಗುಳ್ಳೆಗಳಂತೆ  ಕೈಯಿಂದ ಅಥವಾ ಬೇರೆ ಯಾವ ಚೂಪಾದ ವಸ್ತುವಿನಿಂದ ಒಡೆದುಕೊಳ್ಳಲೇ ಬಾರದು. ಏಕೆಂದರೆ, ಈ ಬ್ಯಾಕ್ಟೀರಿಯಾ ಸೋಂಕು ನಿಮ್ಮ ಕಣ್ಣಿನ ರೆಪ್ಪೆಯ ಇತರೆ ಭಾಗಗಳಿಗೂ ಹರಡುತ್ತದೆ ಮತ್ತು ಕಣ್ಣಿನ ಕೇಂದ್ರ ಭಾಗಗಳಿಗೂ ಹರಡುವ ದೊಡ್ಡ ಅಪಾಯ ಇರುತ್ತದೆ. ಇನ್ನೂ ಕೆಲವೊಂದು ವಿರಳ ಪ್ರಕರಣಗಳಲ್ಲಿ ಈ ಸೋಂಕು ಮೆದುಳಿಗೂ ಹರಡಿ, ಮಾರಣಾಂತಿಕ ಆಗಬಹುದಂತೆ.


ಈ ಸೋಂಕು ಕಡಿಮೆ ಮಾಡಲು ಒಂದು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಬಿಸಿ ಮಾಡಿ ಅಥವಾ ಬಿಸಿನೀರನ್ನು ವಾಟರ್ ಬ್ಯಾಗ್ ಅಲ್ಲಿ ಕಟ್ಟಿಕೊಂಡು ನಿಮ್ಮ ಕಣ್ಣಿನ ಗುಳ್ಳೆಗೆ ಬಿಸಿ ನೀಡಿಕೊಳ್ಳಿ. ಇದು ಸೋಂಕು ಕರಗುವಂತೆ ಮಾಡುತ್ತದೆ. ಒಂದು ವೇಳೆ ತುಂಬಾ ನೋವು ಕಾಣಿಸಿಕೊಂಡರೆ ವೈದ್ಯರನ್ನ ಭೇಟಿ ಮಾಡುವುದು ಅಗತ್ಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಮುಂದಿನ ಸುದ್ದಿ
Show comments