Select Your Language

Notifications

webdunia
webdunia
webdunia
webdunia

ತೂಕ ಇಳಿಸಿಕೊಂಡಿದ್ದಕ್ಕೆ ನಿಮ್ಮ ಚರ್ಮ ಜೋತು ಬಿದ್ದಿದೇಯಾ. ಇಲ್ಲಿದೆ ನೋಡಿ ಅದಕ್ಕೆ ಪರಿಹಾರ

ತೂಕ ಇಳಿಸಿಕೊಂಡಿದ್ದಕ್ಕೆ  ನಿಮ್ಮ ಚರ್ಮ ಜೋತು ಬಿದ್ದಿದೇಯಾ. ಇಲ್ಲಿದೆ ನೋಡಿ ಅದಕ್ಕೆ ಪರಿಹಾರ
ಬೆಂಗಳೂರು , ಭಾನುವಾರ, 18 ನವೆಂಬರ್ 2018 (15:43 IST)
ಬೆಂಗಳೂರು : ದಪ್ಪಗಿದ್ದವರು ತೂಕ ಇಳಿಸಿಕೊಂಡಾಗ ಅವರ ಚರ್ಮ ಜೋತುಬೀಳುತ್ತದೆ. ಈ ರೀತಿ ಜೋತುಬಿದ್ದ ಚರ್ಮವನ್ನು ಕೆಲವು ಮನೆಮದ್ದುಗಳಿಂದ ಸರಿಪಡಿಸಿಕೊಳ್ಳಬಹುದು.


ಮೊಟ್ಟೆಯನ್ನು ಒಡೆದು, ಅದರ ಬಿಳಿ ಭಾಗವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ನೊರೆ ಬರುವವರೆಗೂ ಸ್ಪೂನ್ ಅಲ್ಲಿ ಚೆನ್ನಾಗಿ ಕಲಿಸಿಕೊಳ್ಳಿ . ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ.
ಆಲೋ ವೆರಾದ ಜೆಲ್ ಅನ್ನು ಹೊರತೆಗೆದು, ಅದನ್ನು ನಿಮ್ಮ ಮುಖ, ಕತ್ತು ಮತ್ತು ಇತರೆ ಹಾನಿಯಾದ ಭಾಗಗಳಿಗೆ ಹಚ್ಚಿಕೊಳ್ಳಿ. ಅದನ್ನು ಹಾಗೆಯೇ 15-20 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಇದನ್ನು ನೀವು ವಾರದಲ್ಲಿ ಹಲವು ಬಾರಿ ಮಾಡಬಹುದು.


ಆಲಿವ್ ಆಯಿಲ್, ನಿಂಬೆ ರಸ, ಕೆಲವು ಸ್ಪೂನ್ ಅಷ್ಟು ಜೇನುತುಪ್ಪ - ಈ ಮೂರನ್ನೂ ಬೆರೆಸಿಕೊಂಡು ಅದನ್ನು ಕುತ್ತಿಗೆಗೆ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. ಅದರ ಮೇಲೆ ಬೆರಳುಗಳಿಂದ ಮೆಲ್ಲನೆ ತಟ್ಟಿಕೊಳ್ಳುತ್ತ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಇದನ್ನು ನೀವು ದಿನಕ್ಕೆ 1-2 ಬಾರಿ ಮಾಡಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೈ ಸ್ಕಿನ್ ಸಮಸ್ಯೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ ನೋಡಿ