ಆರೋಗ್ಯದ ಗುಟ್ಟು ಒಂದು ಮೊಟ್ಟೆಯಲ್ಲಿದೆ

Webdunia
ಶನಿವಾರ, 9 ಅಕ್ಟೋಬರ್ 2021 (14:02 IST)
ಮೊಟ್ಟೆಗಳನ್ನು ಪ್ರೋಟಿನ್ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ. ಇದರಲ್ಲಿ 13 ವಿವಿಧ ರೀತಿಯ ವಿಟಮಿನ್ ಗಳು, ಖನಿಜಗಳು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳಿವೆ. ಹೆಚ್ಚಿನ ಜನರು ಬೆಳಗಿನ ತಿಂಡಿಗೆ ಮೊಟ್ಟೆ ತಿನ್ನಲು ಬಯಸ್ತಾರೆ.

ಅಧ್ಯಯನದ ಪ್ರಕಾರ, ಮೊಟ್ಟೆ ಸೇವನೆಯಿಂದ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.
ಒಂದು ದೊಡ್ಡ ಮೊಟ್ಟೆ ಸುಮಾರು 77 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಮೊಟ್ಟೆ ವಿಟಮಿನ್ ಎ, ಬಿ 5, ಬಿ 12, ಬಿ 6, ಡಿ, ಇ, ಕೆ, ಖನಿಜಗಳಾದ ಫೋಲೇಟ್, ರಂಜಕ, ಸೆಲೆನಿಯಂ, ಕ್ಯಾಲ್ಸಿಯಂ, ಸತು, ಪ್ರೋಟೀನ್ ಹೊಂದಿದ್ದು, ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಕೋಲೀನ್ ಹೆಚ್ಚಿನ ಜನರಿಗೆ ಸಿಗದ ಪ್ರಮುಖ ಪೋಷಕಾಂಶವಾಗಿದೆ. ದೇಹದಲ್ಲಿ ಜೀವಕೋಶ ಪೊರೆಗಳು ಮತ್ತು ಮೆದುಳಿನ ಅಣುಗಳನ್ನು ನಿರ್ಮಿಸಲು ಕೋಲೀನ್ ಕೆಲಸ ಮಾಡುತ್ತದೆ. ದೇಹದಲ್ಲಿ ಕೋಲೀನ್ ಕೊರತೆಯು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬೇಯಿಸಿದ ಮೊಟ್ಟೆಯಲ್ಲಿ ಸುಮಾರು 417 ಮಿಗ್ರಾಂ ಕೋಲೀನ್ ಕಂಡುಬರುತ್ತದೆ.

ಮೊಟ್ಟೆಗಳು ಲುಟೀನ್ ಮತ್ತು ಜೀಕ್ಸಾಂಥಿನ್ ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೃಷ್ಟಿಯನ್ನು ಸುಧಾರಿಸುತ್ತದೆ. ಮೊಟ್ಟೆಯಲ್ಲಿ ವಿಟಮಿನ್ ಎ ಸಮೃದ್ಧವಾಗಿರುವುದರಿಂದ ಇದನ್ನು ಕಣ್ಣುಗಳಿಗೆ ಅಗತ್ಯವಾದ ವಿಟಮಿನ್ ಎಂದು ಪರಿಗಣಿಸಲಾಗುತ್ತದೆ.
ಒಂದು ಮೊಟ್ಟೆಯಲ್ಲಿ 6 ಗ್ರಾಂ ಪ್ರೋಟೀನ್ ಇರುತ್ತದೆ. ಇದು ತೂಕ ಇಳಿಕೆಗೆ ಪರಿಣಾಮಕಾರಿ. ಸ್ನಾಯುವಿನ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಿ ಮೂಳೆಗಳನ್ನು ಬಲಪಡಿಸುತ್ತದೆ.
ಒಮೆಗಾ -3 ಕೊಬ್ಬಿನಾಮ್ಲಗಳು ಮೊಟ್ಟೆಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಹೃದಯ, ಮೆದುಳು ಮತ್ತು ಕಣ್ಣುಗಳಿಗೆ ತುಂಬಾ ಒಳ್ಳೆಯದು. ಮೊಟ್ಟೆಯಲ್ಲಿ ಬಹಳಷ್ಟು ಕೊಲೆಸ್ಟ್ರಾಲ್ ಕಂಡುಬರುತ್ತದೆ. ಆದರೆ ಇದು ರಕ್ತದ ಕೊಲೆಸ್ಟ್ರಾಲ್ ಮೇಲೆ ಪರಿಣಾಮ ಬೀರುವುದಿಲ್ಲ.
ತೂಕ ಇಳಿಸಿಕೊಳ್ಳಲು, ಕಡಿಮೆ ಕ್ಯಾಲೋರಿ ತಿನ್ನಲು ಬಯಸಿದರೆ ಮೊಟ್ಟೆಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಮೊಟ್ಟೆಯಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ಇರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಚಳಿಗಾಲದಲ್ಲಿ ಮೂಗು ಕಟ್ಟುತ್ತಿದ್ದರೆ ಹೀಗೆ ಮಾಡಿ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮುಂದಿನ ಸುದ್ದಿ
Show comments