Select Your Language

Notifications

webdunia
webdunia
webdunia
Sunday, 13 April 2025
webdunia

ರುಚಿಕರವಾದ ಪುದೀನಾ ರೈಸ್ ಬಾತ್

ಬೆಂಗಳೂರು
ಬೆಂಗಳೂರು , ಬುಧವಾರ, 29 ಜುಲೈ 2020 (08:45 IST)
Normal 0 false false false EN-US X-NONE X-NONE

ಬೆಂಗಳೂರು : ಪುದೀನಾ ಸೊಪ್ಪು ಆರೋಗ್ಯಕ್ಕೆ ಉತ್ತಮ. ಆದಕಾರಣ ಪುದೀನಾ ರೈಸ್ ಬಾತ್ ತಯಾರಿಸಿ ತಿನ್ನಿ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ಅಕ್ಕಿ, ಪುದೀನಾ ಸೊಪ್ಪು, ಸಾಸಿವೆ ಸ್ವಲ್ಪ, ತುಪ್ಪ-2 ಚಮಚ, ಈರುಳ್ಳಿ, ಟೊಮೆಟೋ 1, ಕರಿಬೇವು ಸೊಪ್ಪು. ಶುಂಠಿ ½  ತುಂಡು, ಹಸಿಮೆಣಸು-2, ಒಣಮೆಣಸು 1, ಸ್ವಲ್ಪ ಕೊತ್ತಂಬರಿಸೊಪ್ಪು.

ಮಾಡುವ ವಿಧಾನ : ಮೊದಲಿಗೆ ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರು ಹಾಕಿ ಕುಕ್ಕರ್ ನಲ್ಲಿ ಮೂರು ವಿಷಲ್ ಕೂಗಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಪುದೀನಾ, ಕೊತ್ತಂಬರಿ, ಹಸಿಮೆಣಸು, ಶುಂಠಿ ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ, ಸಾಸಿವೆ, ಕರಿಬೇವು, ಈರುಳ್ಳಿ, ಟೊಮೆಟೋ, ಉಪ್ಪು ಸೇರಿಸಿ ಬಾಡಿಸಿಕೊಳ್ಳಿ. ನಂತರ ಅದಕ್ಕೆ ಈ ಮಿಕ್ಸಿ ಮಾಡಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಬಳಿಕ ಅನ್ನ ಸೇರಿಸಿ ಚೆನ್ನಾಗಿ ಕಲಿಸಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಸುಲಭವಾಗಿ ಮಾಡಿ ರವಾ ಇಡ್ಲಿ