Publish Date: Sat, 13 Jul 2019 (06:05 IST)
Updated Date: Sat, 13 Jul 2019 (06:07 IST)
ಬೆಂಗಳೂರು : ನನ್ನ ವಯಸ್ಸು 33 ಮತ್ತು ನನ್ನ ಪತಿಗೆ 39 ವರ್ಷ. ನನ್ನ ಪತಿ ವಾರಕ್ಕೆ ಮೂರು ಬಾರಿಯಾದರೂ ಕೆಲಸಕ್ಕೆಂದು ನಗರಕ್ಕೆ ಹೋಗುತ್ತಾರೆ. ಇತ್ತೀಚೆಗೆ ಅವರ ಬ್ಯಾಗ್ ನಲ್ಲಿ ಕಾಂಡೋಮ್ ಇರುವುದನ್ನು ಗಮನಿಸಿದ್ದೆ. ಅವರು ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬುದು ನನ್ನ ಅನುಮಾನ. ಈ ವಿಷಯದ ಬಗ್ಗೆ ನಾನು ಅವರ ಜೊತೆ ಚರ್ಚಿಸಲೇ?
ನೀವು ಈ ಬಗ್ಗೆ ಆತನೊಂದಿಗೆ ಸಮಾಧಾನವಾಗಿ ಚರ್ಚಸುವುದೇ ಉತ್ತಮ. ಇಲ್ಲವಾದರೆ ಈ ಸಮಸ್ಯೆಗೆ ಪರಿಹಾರ ಸಿಗಲ್ಲ. ಆದ್ದರಿಂದ ಮೊದಲು ನೀವು ಆತನೊಡನೆ ಚರ್ಚಿಸಲೇಬೇಕೆಂದು ನಿರ್ಧರಿಸಿ. ನಂತರ ಈ ವಿಷಯದ ಬಗ್ಗೆ ಹೇಗೆ ಮಾತನಾಡಲು ಶುರು ಮಾಡಲಿ ಎಂಬುದನ್ನು ನಿರ್ಧರಿಸಿ.