Select Your Language

Notifications

webdunia
webdunia
webdunia
webdunia

ಇಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ವೈದ್ಯರ ಮೊರೆ ಹೋಗುವ ಬದಲು ಈ ಮನೆಮದ್ದುಗಳನ್ನು ಬಳಸಿ

ಇಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ವೈದ್ಯರ ಮೊರೆ ಹೋಗುವ ಬದಲು ಈ ಮನೆಮದ್ದುಗಳನ್ನು ಬಳಸಿ
ಬೆಂಗಳೂರು , ಶನಿವಾರ, 13 ಜುಲೈ 2019 (06:01 IST)
ಬೆಂಗಳೂರು : ನಮ್ಮ ಹಿರಿಯರು ಒಂದೊಂದು ಸಮಸ್ಯೆಗೂ ಒಂದೊಂದು ಬಗೆಯ ಮನೆಮದ್ದುಗಳನ್ನು ಕಂಡುಹಿಡಿದಿದ್ದಾರೆ. ಆದರೆ ಆ ಬಗ್ಗೆ ಈಗಿನ ಕಾಲದವರಿಗೆ ತಿಳಿದಿಲ್ಲ. ಈಗಿನವರೂ ಹೆಚ್ಚಾಗಿ ಇಂಗ್ಲಿಷ್ ಮೆಡಿಸಿನ್ ಗಳ ಮೊರೆ ಹೋಗುತ್ತಾರೆ. ಅದರ ಬದಲು ಈ ಸಣ್ಣಪುಟ್ಟ ಸಮಸ್ಯೆಗಳನ್ನು ಮನೆಮದ್ದಿನಿಂದಲೇ ನಿವಾರಿಸಿಕೊಳ್ಳುವುದು ಉತ್ತಮವೆಂದು ಹಿರಿಯರು ಹೇಳುತ್ತಾರೆ.




* ಪೆಟ್ಟು ಬಿದ್ದ ಸ್ಥಳದಲ್ಲಿ ಅಥವಾ ನೋವಿರುವ ಸ್ಥಳದಲ್ಲಿ ಊತ ಉಂಟಾಗಿದ್ದರೆ ಶ್ರೀಗಂಧದ ಚಕ್ಕೆಯನ್ನು ನೀರಿನಲ್ಲಿ ತೇದು ಗಂಧ ತೆಗೆದು ಊತವಿರುವ ಭಾಗಕ್ಕೆ ಲೇಪಿಸುವುದರಿಂದ ಊತ ಇಳಿಯುತ್ತದೆ.


*ಕೈ ಪದೇ ಪದೇ ಬೆವರುತ್ತಿದ್ದರೆ ನೆಲ್ಲಿ ಕಾಯಿಯನ್ನು ಜಜ್ಜಿ ರಸ ತೆಗೆದು ಅದನ್ನು ಪ್ರತಿದಿನ ಅಂಗೈ, ಅಂಗಾಲಿಗೆ ಲೇಪಿಸಿದರೆ ಬೆವರುವುದು ನಿಲ್ಲುತ್ತದೆಯಂತೆ.


* ಆಲೂಗಡ್ಡೆಯನ್ನು ನಿಂಬೆ ರಸದಲ್ಲಿ ನುಣ್ಣಗೆ ಅರೆದು ಚರ್ಮದ ಮೇಲೆ ಲೇಪಿಸಿದರೆ ತುರಿಕೆ, ಕಜ್ಜಿ, ಅಲರ್ಜಿಗಳು ನಿವಾರಣೆಯಗುತ್ತವೆ.


* ಜ್ವರ ಆರಂಭವಾದ ಕೂಡಲೇ, 20 ಮಿ.ಲೀ ನೀರಿಗೆ ಒಂದು ನಿಂಬೆಹಣ್ಣಿನ ರಸ, ಮೂರು ಚಮಚ ಮೂಸಂಬಿ ರಸ ಬೆರೆಸಿ ನಿತ್ಯ ಕುಡಿದರೆ ಜ್ವರ ಬೇಗ ನಿಯಂತ್ರಣಕ್ಕೆ ಬರುತ್ತದೆಯಂತೆ.


* ಹೊಟ್ಟೆನೋವಿಗೆ ಹೆಚ್ಚಾಗಿದ್ದರೆ ಬೆಲ್ಲದಲ್ಲಿ ಕಾಳುಮೆಣಸಿನಪುಡಿ ಬೆರೆಸಿ ಸೇವಿಸಿದರೆ ನೋವು ಬೇಗನೆ ಶಮನವಾಗುತ್ತದೆ.


* ಒಣಕೆಮ್ಮು, ಅಥವಾ ಗಂಟಲಿಗೆ ಸಂಬಂದಿಸಿದ ರೋಗಗಳಿಗೆ ಬೆಲ್ಲದಲ್ಲಿ ಅರಿಶಿಣಪುಡಿ ಸೇರಿಸಿ ಸೇವಿಸಿದರೆ ನಿವಾರಣೆಯಾಗಗುತ್ತದೆ.



 

 

Share this Story:

Follow Webdunia kannada

ಮುಂದಿನ ಸುದ್ದಿ

ಮೊಡವೆ ಸಮಸ್ಯೆ ನಿವಾರಿಸಲು ಪುರುಷರು ಬಳಸಿ ಈ ಫೇಸ್ ಪ್ಯಾಕ್