Select Your Language

Notifications

webdunia
webdunia
webdunia
webdunia

ಸ್ವಸ್ಥವಾಗಿರಲು ಕೆಲವು ಸಲಹೆಗಳು...

ಸ್ವಸ್ಥವಾಗಿರಲು ಕೆಲವು ಸಲಹೆಗಳು...
, ಶುಕ್ರವಾರ, 8 ಜುಲೈ 2016 (10:48 IST)
ಆರೋಗ್ಯವೇ ಜೀವನದಲ್ಲಿ ನಾವು ಹೊಂದಿರಬೇಕಾದ ಬಹುದೊಡ್ಡ ಸಂಪತ್ತು ಎನ್ನುತ್ತಾರೆ. ಹಿಂದಿನವರು ಶ್ರಮವಹಿಸಿ ದುಡಿಯುತ್ತಿದ್ದರು. 100 ವರ್ಷದ ತುಂಬು ಜೀವನವನ್ನು ನಡೆಸುತ್ತಿದ್ದರು. ಆದರೆ ಈಗಿನ ಜೀವನಶೈಲಿ, ಆಹಾರ ಪದ್ಧತಿ ನಮ್ಮನ್ನು ರೋಗಿಗಳನ್ನಾಗಿಸುತ್ತಿದೆ. ಪ್ರತಿಯೊಂದಕ್ಕೂ ಒಂದು ವ್ಯವಸ್ಥೆ ಎನ್ನುವುದಿರುತ್ತದೆ.  ಹಣ್ಣುಗಳು, ತಾಜಾ ತರಕಾರಿಗಳು ಸುವ್ಯವಸ್ಥಿತ ಆಹಾರ ಪದ್ಧತಿಯ ಒಂದು ಭಾಗವಾಗಿವೆ. 
 
ಯಾವುದು ದೇಹಕ್ಕೆ ಉತ್ತಮ ಮೊದಲಾದ ಅಂಶಗಳನ್ನು ತಿಳಿಯುವುದು ಅತ್ಯವಶ್ಯಕ ಅದಕ್ಕಾಗಿ ಇಲ್ಲಿದೆ ಕೆಲವೊಂದು ಉತ್ತಮ ಸಲಹೆಗಳು: 
 
*ತಾಜಾ ತರಕಾರಿಗಳು ಹಣ್ಣುಗಳಿಗಿಂತಲೂ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅದರಲ್ಲೂ ಕೆಲವೊಂದು ತರಕಾರಿಗಳು ಆರೋಗ್ಯವಂತರಾಗಿ ಇರಲು ಹಣ್ಣುಗಳಿಗಿಂತ ಹೆಚ್ಚು ಪ್ರಯೋಜನಕಾರಿ .
 
* ಗಿಡಮೂಲಿಕೆಗಳಾದ ತುಳಸಿ. ಒಂದೆಲಗ, ಸೊಪ್ಪುಗಳಾದ ಪಾಲಾಕ್, ಪುದೀನಾ, ಮೆಂತೆಸೊಪ್ಪು ಮೊದಲಾದವುಗಳ ಬಳಕೆ ಆದಷ್ಟು ಮಾಡಿ. 
 
* ನಿಮ್ಮ ದಿನನಿತ್ಯದ ಆಹಾರದಲ್ಲಿ ನಾರಿನ ಅಂಶಗಳು ಹೆಚ್ಚಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. 
 
* ನಿಮ್ಮ ದೈನಂದಿನ ಜೀವನ ವೇಳಾಪಟ್ಟಿಯ ಮಾದರಿಯಲ್ಲಿ ರೂಪಿತವಾಗಿರಲಿ. ಸಮಯಕ್ಕೆ ಸರಿಯಾಗಿ ಊಟ, ನಿದ್ದೆ, ಇರಲಿ
 
* ವೈದ್ಯರ ಸಂಪರ್ಕವನ್ನು ಯಾವುದೇ ಹಿಂಜರಿಕೆಯಿಲ್ಲದೆ ಮಾಡಿ. 
 
* ಪ್ರತಿದಿನ ಯೋಗ, ಪ್ರಾಣಾಯಾಮ, ಸೈಕ್‌ಲಿಂಗ್, ಈಜುವುದು, ಏರೋಬಿಕ್ಸ್ ಮೊದಲಾದ ದೈಹಿಕ ಚಟುವಟಿಕೆಗಳನ್ನು ಮರೆಯದೆ ಮಾಡಿ.
 
* ಉತ್ತಮ ಆರೋಗ್ಯವನ್ನು ಪಡೆಯುವುದು ನಮ್ಮ ಕೈಯಲ್ಲಿದೆ. ಆದ್ದರಿಂದ ಸೋಮಾರಿತನಕ್ಕೆ ಎಡೆ ಮಾಡಿಕೊಡುವಂತಹ ಆಹಾರ ಪದಾರ್ಥದ ವರ್ಜನೆ ಅತೀ ಮುಖ್ಯವಾದುದು.
 
* ಹೆಚ್ಚು ಬೊಜ್ಜಿನ ಆಹಾತಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳುವುದು ಉತ್ತಮ
 
* ಬಿಸಿ ನೀರ ಸೇವನೆ ದೇಹದ ಪಚನ ಕ್ರಿಯೆಗೆ ಸಹಕಾರಿ. 
 
* ನಿಮ್ಮ ಆಹಾರದಲ್ಲಿ ಆದಷ್ಟು ಮಾಂಸಾಹಾರವನ್ನು ಕಡಿಮೆಗೊಳಿಸಿ ಸಸ್ಯಾಹಾರಕ್ಕೆ ಹೆಚ್ಚಿನ ಪ್ರಧಾನತೆ ನೀಡಿ. 
 
* ತಂಪಾದ ಹಾಗೂ ತುಂಬಾ ಬಿಸಿಯಾದ ಆಹಾರ ಪದಾರ್ಥಗಳ ಸೇವನೆ ಬೇಡ. 
 
* ಕೋಕ್ ಪೆಪ್ಸಿ ಮೊದಲಾದ ತಂಪು ಪಾನೀಯಗಳ ಬಳಕೆ ಆದಷ್ಟು ಕಡಿಮೆ ಮಾಡಿ. ಇದರೊಂದಿಗೆ ಸಣ್ಣ ಪುಟ್ಟ ಮನೆಗೆಲಸಗಳನ್ನು ಮಾಡುವುದು ಆರೋಗ್ಯಕ್ಕೂ ಒಳ್ಳೆಯದು ಎಂಬುದನ್ನು ನೆನಪಿಡಿ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವರ್ಕೌಟ್ ಬಳಿಕ ಇಂಥ ಆಹಾರಗಳನ್ನು ಸೇವಿಸಲೇಬಾರದು..!