Select Your Language

Notifications

webdunia
webdunia
webdunia
webdunia

ವರ್ಕೌಟ್ ಬಳಿಕ ಇಂಥ ಆಹಾರಗಳನ್ನು ಸೇವಿಸಲೇಬಾರದು..!

ವರ್ಕೌಟ್ ಬಳಿಕ ಇಂಥ ಆಹಾರಗಳನ್ನು ಸೇವಿಸಲೇಬಾರದು..!
ಬೆಂಗಳೂರು , ಶುಕ್ರವಾರ, 8 ಜುಲೈ 2016 (10:29 IST)
ಜಾಸ್ತಿ ವರ್ಕೌಟ್ ಮಾಡುತ್ತಿದ್ದೀರಾ? ದೇಹದ ಫಿಟ್ನೆಸ್ ಹಾಗೂ ಸಿಕ್ಸ್ ಪ್ಯಾಕ್‌ಗೆ ಪ್ರೋಟೀನ್ ಯುಕ್ತ ಆಹಾರ ಅತೀ ಮುಖ್ಯವೇನು ಸರಿ. ದೇಹದ ಫಿಟ್ನೆಸ್‌ಗಾಗಿ ವರ್ಕೌಟ್ ಮಾಡುತ್ತೇವೆ. ಈ ಸಮಯದಲ್ಲಿ ದೇಹಕ್ಕೆ ಪ್ರೋಟೀನ್ ಯುಕ್ತ ಆಹಾರಗಳು ಅಷ್ಟೇ ಮುಖ್ಯ. ಆದ್ರೆ  ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಂಟರೂ ಶೇಪ್ ಇಲ್ಲದಿರುವುದನ್ನು ಗಮನಿಸಿರುತ್ತೇವೆ.. ಇಂಥ ಸಮಯದಲ್ಲಿ ಆಹಾರ ಸೇವನೆ ಅತಿ ಮುಖ್ಯ.

ದೇಹಕ್ಕೆ ಉತ್ತಮ ಶೇಪ್ ಕಾಣಬೇಕಾದರೆ ಹೊಟ್ಟೆಯ ಕೊಬ್ಬನ್ನು ಕರಗಿಸಿ ಒಳ್ಳೆಯ ಲುಕ್ ಕೊಡಬೇಕಾಗುತ್ತದೆ. ಇಂಥ ಸಮಯದಲ್ಲಿ ಕೆಲ ಆಹಾರಗಳನ್ನು ನೀವೂ ವರ್ಜಿಸಲೆಬೇಕು. 
 
ಆದ್ರೆ ವರ್ಕೌಟ್ ಮಾಡಿದ ಬಳಿಕ ನೀವೂ ಕೆಲ ಆಹಾರಗಳನ್ನು ಸೇವಿಸಲೇಬಾರದು,   ಎಂಥಾ ಆಹಾರಗಳನ್ನು ಸೇವಿಸಬೇಕು, ಸೇವಿಸಬಾರದು ಕುರಿತು ಇಲ್ಲಿದೆ ಮಾಹಿತಿ. 
 
ಹಸಿ ತರಕಾರಿ: 
ದೇಹದ ವರ್ಕೌಟ್ ಬಳಿಕ ಹಸಿ ತರಕಾರಿಗಳನ್ನು ತಿನ್ನದಿರಿ. ಆ ವೇಳೆಯಲ್ಲಿ ಹಸಿ ತರಕಾರಿ ನಿಮ್ಮಗೆ ಪೌಷ್ಠಿಕಾಂಶಗಳು ಸೀಗುವುದಿಲ್ಲ. ವರ್ಕೌಟ್ ಬಳಿಕ ಹಸಿ ತರಕಾರಿ ಸೇವಿಸುವ  ಆಹಾರದ ಅಭ್ಯಾಸ ಬೀಡುವುದು ಉತ್ತಮ.
 
ಹಣ್ಣಿನ ರಸ: 
ಹಣ್ಣಿಸ ರಸ ದೇಹಕ್ಕೇನು ಉತ್ತಮ ಪಾನೀಯಗಳಲ್ಲಿ ಒಂದು. ಆದ್ರೆ ವರ್ಕೌಟ್ ಆದ ಬಳಿಕ ಹಣ್ಣಿನ ರಸ ಕುಡಿಯಬಾರದು, ಇದರಲ್ಲಿರುವ ಸಕ್ಕರೆ ಅಂಶ ನಿಮ್ಮ ದೇಹಕ್ಕೆ ಪರಿಣಾಮ ಬೀರಬಲ್ಲದ್ದು. 
 
ಫ್ರೈಡ್ ಮೊಟ್ಟೆ:
ಮೊಟ್ಟೆ ದೇಹಕ್ಕೆ ಉತ್ತಮ ಆಹಾರಗಳಲ್ಲಿ ಒಂದು. ಆದ್ರೆ ವರ್ಕೌಟ್ ಬಳಿಕ ಫ್ರೈಡ್ ಮೊಟ್ಟೆಯನ್ನು ಸೇವಿಸಬಾರದು. ಒಂದು ವೇಳೆ ಮೊಟ್ಟೆ ಸೇವಿಸಿದ್ರೆ ನಿಮ್ಮ ತೂಕ ಹೆಚ್ಚಾಗುವ ಸಾಧ್ಯತೆಗಳಿರುತ್ತೇವೆ. ಆದ್ದರಿಂದ ಫ್ರೈಡ್ ಮಾಡಿರುವಂತಹ ಮೊಟ್ಟೆಯನ್ನು ಸೇವಿಸದೇ ಇರುವುದು ಉತ್ತಮ. 
 
ಚಾಕಲೇಟ್:
ಚಾಕಲೇಟ್ ಅನ್ನು ಸೇವಿಸುವುದರಿಂದ ಸ್ವಲ್ಪಮಟ್ಟಿಗೆ ಎನರ್ಜಿ ದೊರೆಯಬಹುದು. ಆದ್ರೆ ವರ್ಕೌಟ್ ಬಳಿಕ ಚಾಕಲೇಟ್ ಸೇವನೆ ಉತ್ತಮವಾದುದಲ್ಲ ಎಂದು ಅಧ್ಯಯನ ಹೇಳುತ್ತಿದೆ. ಚಾಕಲೇಟ್‌ಲ್ಲಿ ಹೆಚ್ಚು ಸಕ್ಕರೆ ಅಂಶ ಇರುವುದರಿಂದ ಹಾಗೂ ಕ್ಯಾಲೋರಿ ಇರುವುದರಿಂದ ನಿಮ್ಮ ವರ್ಕೌಟ್ ಮೇಲೆ ಸಾಕಷ್ಟು ಪರಿಣಾಮ ಬೀರಬಲ್ಲದ್ದು. ಆದ್ದರಿಂದ ವರ್ಕೌಟ್ ಸಮಯದಲ್ಲಿ ಚಾಕಲೇಟ್ ಸೇವನೆ ಮಾಡದಿರಿ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಪಾಸ್ತಾ ತಿನ್ನುವುದರಿಂದ ಬೊಜ್ಜು ಬರುವುದಿಲ್ವಂತೆ..ಇಟಾಲಿಯನ್ ಅಧ್ಯಯನದಿಂದ ಬಹಿರಂಗ