Publish Date: Sat, 11 Aug 2018 (09:25 IST)
Updated Date: Sat, 11 Aug 2018 (09:26 IST)
ಬೆಂಗಳೂರು: ರಾತ್ರಿ ನಿದ್ರೆ ಮಾಡುವಾಗ ತರಹೇವಾರಿ ಕನಸುಗಳು ಬೀಳುವುದು ಸಹಜ. ಒಂದು ವೇಳೆ ನಿಮಗೆ ಆಗಾಗ ಕನಸಿನಲ್ಲಿ ಹಾವು ಕಾಣಿಸಿಕೊಳ‍್ಳುತ್ತದೆ ಎಂದರೆ ಅದರ ಅರ್ಥವೇನು ಗೊತ್ತಾ?
ಧಾರ್ಮಿಕ ನಂಬಿಕೆ ಇರುವವರ ಪ್ರಕಾರ ಇದು ನಾಗದೋಷವೋ ಇನ್ನೇನೋ ಇರಬಹುದು. ಆದರೆ ಮನಶಾಸ್ತ್ರದ ಪ್ರಕಾರ ಹಾವಿಗೂ ಲೈಂಗಿಕತೆಗೂ ಸಂಬಂಧವಿದೆ.
ಹಾವು ಪುರುಷರ ವೀರ್ಯದ ಸಂಕೇತವಂತೆ. ಒಂದು ವೇಳೆ ಕನಸಿನಲ್ಲಿ ಆಗಾಗ ಹಾವು ಕಾಣಿಸಿಕೊಳ್ಳುತ್ತದೆಂದರೆ ನೀವು ಲೈಂಗಿಕ ಸುಖ ಪಡೆಯಲು ಬಯಸುತ್ತೀರಿ ಮತ್ತು ನಿಮ್ಮ ಮನದ ಬಯಕೆ ಇದುವೇ ಎಂದಾಗಿರುತ್ತದೆಯಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.