Select Your Language

Notifications

webdunia
webdunia
webdunia
webdunia

ಧೂಮಪಾನಿಗಳೇ ಎಚ್ಚರ! ಯಾಕೆಂದು ಇದನ್ನು ಓದಿ

ಧೂಮಪಾನಿಗಳೇ ಎಚ್ಚರ! ಯಾಕೆಂದು ಇದನ್ನು ಓದಿ
Bangalore , ಮಂಗಳವಾರ, 27 ಡಿಸೆಂಬರ್ 2016 (07:13 IST)
ಬೆಂಗಳೂರು: ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂದು ಪ್ಯಾಕೆಟ್ ಮೇಲೆಯೇ ನಮೂದಿಸಿರುತ್ತದೆ. ಆದರೂ ಚಟ ಹಿಡಿದವರು ಬಿಡಲು ತಯಾರಿರುವುದಿಲ್ಲ. ಆದರೆ ಇದರಿಂದ ಬರುವ ಆರೋಗ್ಯ ಸಮಸ್ಯೆಗಳು ಯಾವುವು ನೋಡಿಕೊಳ್ಳಿ.


ಮಧುಮೇಹ
ಸಿಹಿ ತಿಂದರೆ ಮಾತ್ರ ಮಧುಮೇಹ ಬರುವುದು ಎಂಬ ತಪ್ಪು ಕಲ್ಪನೆ ಬಿಡಿ. ಸಿಗರೇಟಿನಲ್ಲಿರುವ ತಂಬಾಕು ಕೂಡಾ ನಿಮ್ಮ ದೇಹದಲ್ಲಿ ಸಿಹಿ ಅಂಶ ಜಾಸ್ತಿ ಮಾಡಿ ಮಧುಮೇಹಕ್ಕೆ ಕಾರಣವಾಗಬಹುದು. ಮಧುಮೇಹಿಗಳಲ್ಲಿ, ದೇಹದ ಪ್ರಮುಖ ಅಂಗಾಂಗ ವೈಫಲ್ಯಗಳ ಸಾಧ್ಯತೆ ಹೆಚ್ಚು.

ಕ್ಯಾನ್ಸರ್
ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಧೂಮಪಾನಿಗಳು ಬೇಗನೇ ವಿವಿಧ ರೀತಿಯ ಕ್ಯಾನ್ಸರ್ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ.

ಗರ್ಭಿಣಿಯರಿಗೆ
ಗರ್ಭಿಣಿಯರು ಧೂಮಪಾನದಿಂದ ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಧೂಮಪಾನದ ಹೊಗೆ ಎಳೆದುಕೊಳ್ಳುವುದು ಗರ್ಭಿಣಿಯರ ಆರೋಗ್ಯಕ್ಕೆ ಹಾನಿಕಾರಕ. ಗರ್ಭಪಾತ, ಅವಧಿಗೆ ಮುನ್ನ ಹೆರಿಗೆ, ಭ್ರೂಣದ ಬೆಳವಣಿಗೆ ಕುಂಠಿತವಾಗುವುದು, ಅಸಹಜ ಮಗು ಜನಿಸುವುದು ಇತ್ಯಾದಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಉಸಿರಾಟದ ತೊಂದರೆ
ಇದಂತೂ ಸರ್ವೇ ಸಾಮಾನ್ಯ. ಧೂಮಪಾನ ನಮ್ಮ ಹೃದಯ ಮತ್ತು ಶ್ವಾಸಕೋಶವನ್ನೇ ಹಾಳು ಮಾಡುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ. ಅಲ್ಲದೆ ನಿಯಮಿತವಾಗಿ ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳಬಹುದು.

ಹಾಗಾಗಿ ಧೂಮಪಾನಿಗಳು ಎಚ್ಚರವಾಗಿರುವುದು ಅಗತ್ಯ. ಈ ದುಶ್ಚಟದಿಂದ ನೀವೂ ದೂರವಿದ್ದು, ನಿಮ್ಮ ಹತ್ತಿರದವರನ್ನೂ ಕಾಪಾಡುವುದು ಮುಖ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶೀತ ಪ್ರಕೃತಿಯವರಿಗೆ ಸಿಂಪಲ್ ರೆಸಿಪಿ