Select Your Language

Notifications

webdunia
webdunia
webdunia
webdunia

ಶೀತ ಪ್ರಕೃತಿಯವರಿಗೆ ಸಿಂಪಲ್ ರೆಸಿಪಿ

ಶೀತ ಪ್ರಕೃತಿಯವರಿಗೆ ಸಿಂಪಲ್ ರೆಸಿಪಿ
Bangalore , ಮಂಗಳವಾರ, 27 ಡಿಸೆಂಬರ್ 2016 (07:07 IST)
ಬೆಂಗಳೂರು: ನಿಮಗೆ ಪಕ್ಕನೇ ಅಲರ್ಜಿ ಉಂಟಾಗುವುದೇ? ಬೇಗ ಶೀತವಾಗುವುದೇ? ಯಾವ ವೈದ್ಯರ ಮದ್ದೂ ಹಿಡಿಸುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಬಹುದು.


ಶುಂಠಿಯನ್ನು ಸೆಂಡಗೆಯಂತೆ ಮಾಡಿಕೊಂಡು ದಿನಾ ಸೇವಿಸುವುದರಿಂದ ಶೀತ ಪರಿಹಾರವಾಗುವುದು. ಅದನ್ನು ಮಾಡುವುದು ಹೇಗೆಂದು ತಲೆ ಕಡಿಸಿಕೊಳ್ಳಬೇಕಿಲ್ಲ. ಹೀಗೆ ಮಾಡಿ ನೋಡಬಹುದು.

ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದೆರಡು ದಿನ ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ಮೇಲೆ ಇದನ್ನು ಒಂದು ಬೆಚ್ಚನೆಯ ಬಾಟಲಿಯಲ್ಲಿ ತುಂಬಿಡಿ.

ಈ ಮನೆ ಔಷಧಿಯನ್ನು ದಿನಾ ಸೇವಿಸುತ್ತಾ ಬರುವುದರಿಂದ ಶೀತದ ಎಲ್ಲಾ ತೊಂದರೆಯವರಿಗೂ ಉತ್ತಮ ಪರಿಹಾರ ಕೊಡುತ್ತದೆ. ಗಂಟಲು ಕೆರೆತ, ಕೆಮ್ಮು ಮುಂತಾದ ರೋಗಗಳಿಗೆ ಇದು ಸುಲಭ ಸಿದ್ಧ ಔಷಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಮಿಲನದಲ್ಲಿಯೇ ಗರ್ಭಧರಿಸುತ್ತಾರೆಯೇ..?