ಬೆಂಗಳೂರು: ಮೊಡವೆ ಮುಖದ ಅಂದವನ್ನೇ ಹಾಳು ಮಾಡುತ್ತಿದೆಯೇ? ಕ್ರೀಂ ಹಚ್ಚಿ ಸಾಕಾಗಿದೆಯೇ? ಹಾಗಿದ್ದರೆ ಮನೆಯಲ್ಲೇ ಮಾಡಬಹುದಾದ ಈ ಸುಲಭ ವಿಧಾನ ಮಾಡಿ ನೋಡಿ.
ಮುಖದ ಮೇಲೆ ದಪ್ಪ ಮೊಡವೆ ಬಿದ್ದು, ಊದಿಕೊಂಡಂತೆ ಇದ್ದರೆ, ಐಸ್ ಕ್ಯೂಬ್ ಸಹಾಯಕ್ಕೆ ಬರಬಹುದು. ಇದು ಆ ಜಾಗದಲ್ಲಿ ರಕ್ತ ಸಂಚಾರ ಸುಗಮಗೊಳಿಸಿ, ಚರ್ಮದಲ್ಲಿ ಅಂಟಿಕೊಂಡ ಕೊಳೆಯನ್ನು ನಾಶ ಮಾಡುತ್ತದೆ.
ಅದಕ್ಕಾಗಿ ಮಾಡಬೇಕಾಗಿರುವು ಇಷ್ಟೇ. ಐಸ್ ತುಂಡನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಮೊಡವೆ ಇರುವ ಜಾಗದಲ್ಲಿ ಉಜ್ಜಿಕೊಳ್ಳಿ. ಹೀಗೇ ಕೆಲವು ಸೆಕೆಂಡ್ ಗಳ ಕಾಲ ಮಾಡಿ. ನಿಯಮಿತವಾಗಿ ಹೀಗೇ ಮಾಡುತ್ತಿದ್ದರೆ ಚರ್ಮಕ್ಕೆ ಅಂಟಿಕೊಂಡ ಕೊಳೆ ನಾಶವಾಗಿ ಮೊಡವೆ ಬೀಳುವುದೂ ಕಡಿಮೆಯಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ