Select Your Language

Notifications

webdunia
webdunia
webdunia
webdunia

ಮಲಬದ್ಧತೆಯೇ? ಮನೆಯಲ್ಲೇ ಈ ಮದ್ದು ಮಾಡಿ

ಮಲಬದ್ಧತೆಯೇ? ಮನೆಯಲ್ಲೇ ಈ ಮದ್ದು ಮಾಡಿ
Bangalore , ಬುಧವಾರ, 8 ಮಾರ್ಚ್ 2017 (11:11 IST)
ಬೆಂಗಳೂರು:  ಮಲಬದ್ಧತೆ ಎನ್ನುವುದು ಯಾರಲ್ಲೂ ಹೇಳಿಕೊಳ್ಳಲಾಗದ ಕಿತ್ತು ತಿನ್ನುವ ಸಮಸ್ಯೆ. ಇದಕ್ಕೆ ನಮ್ಮ ಆಹಾರದಲ್ಲೇ ಕೆಲವು ಬದಲಾವಣೆ ತಂದುಕೊಂಡರೆ, ಆರೋಗ್ಯ ಕಾಪಾಡಿಕೊಳ್ಳಬಹುದು.

 
ಶುಂಠಿ ಮತ್ತು ಪುದೀನಾ ನಮ್ಮ ಮನೆಯಲ್ಲಿ ಸದಾ ಇರುತ್ತದಲ್ವಾ? ಇದುವೇ ಮಲಬದ್ಧತೆಗೆ ಪರಿಹಾರ ಕೊಡುತ್ತದೆ. ದಿನಾ ಸೇವಿಸುವ ಚಹಾಕ್ಕೆ ಶುಂಠಿ ಅಥವಾ ಪುದೀನಾ ಎಲೆ ಹಾಕಿ ಸೇವಿಸಿದರೆ, ಅದು ನಮ್ಮ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಬಹಿರ್ದೆಸೆಗೆ ಕೂರುವಾಗ ತಿಣುಕಾಡಬೇಕಿಲ್ಲ.

ನಿಂಬೆ ಹಣ್ಣು ಕೂಡಾ ಮಲಬದ್ಧತೆಗೆ ಪರಿಹಾರ ನೀಡಬಲ್ಲದು. ಪ್ರತಿ ನಿತ್ಯ ಬೆಳಿಗ್ಗೆ ನಿಂಬೆ ಹಣ್ಣಿನ ರಸ ಹಾಕಿದ ಹಸ ಬಿಸಿ ನೀರು ಸೇವಿಸುವುದರಿಂದ ಜೀರ್ಣಕ್ರಿಯೆಯೂ ಸುಗಮವಾಗುತ್ತದೆ.  ಅಲ್ಲದೆ, ಇದು ಇನ್ನಷ್ಟು ನೀರು ಕುಡಿಯಲು ಪ್ರೇರೇಪಿಸುತ್ತದೆ. ಇದರಿಂದ ಮಲ ವಿಸರ್ಜನೆ ಸುಗಮವಾಗುತ್ತದೆ.

ಅದೇ ರೀತಿ ಹರಳೆಣ್ಣೆಯನ್ನು ಪ್ರತಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಸ್ಪೂನ್ ಸೇವಿಸಿದರೆ, ಕೆಲವೇ ಗಂಟೆಗಳಲ್ಲಿ ಅದರ ಪರಿಣಾಮ ಗೊತ್ತಾಗುತ್ತದೆ. ಇದರ ಜತೆಗೆ ಆಹಾರದಲ್ಲಿ ಸಾಕಷ್ಟು ನಾರಿನಂಶವಿರುವ ತರಕಾರಿಗಳನ್ನು ಸೇವಿಸಿ. ಬೇಳೆ ಕಾಳುಗಳು, ಬೀನ್ಸ್,  ಹೀರೇಕಾಯಿ, ಬಾರ್ಲಿ, ಬಾದಾಮಿ ಸೇವಿಸುವುದರಿಂದ ಮಲಬದ್ಧತೆಗೆ ಪರಿಹಾರ ಸಿಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ವಯಸ್ಸು 30 ಆಸುಪಾಸಿದೆಯೇ? ಹಾಗಾದರೆ ದಯವಿಟ್ಟು ಇದನ್ನೋದಿ