ಬೆಂಗಳೂರು- ತುಳಸಿ ಗಿಡಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ಮಹತ್ವ ಇದೆ.ಒಂದು ಇತಿಹಾಸವು ಇದೆ.ತುಳಸಿ ಗಿಡಕ್ಕೆ ಬೆಳ್ಳಿಗೆ ಪೂಜೆ ಮಾಡಿದ್ರೆ ತುಳಸಿ ಮಾತೆ ಮುಟ್ಟಿದೆಲ್ಲ ಬಂಗಾರ ಮಾಡುತ್ತಾಳೆ.ಅದೇ ರೀತಿ ತುಳಸಿಯಿಂದ ಹಲವು ರೀತಿಯ ಪ್ರಯೋಜಮಗಳಿವೆ.
ಗಂಟಲು ನೋವು ಇದ್ದವರು ಬೆಳ್ಳಿಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲ್ಲೆಯ ಜೊತೆ ಉಪ್ಪು ,ಮೆಣಸಿನ ಜೊತೆ ತಿಂದರೆ ಗಂಟಲು ನೋವು,ಶೀತ ವಾಸಿಯಾಗುವುದು .ಅಷ್ಟೇ ಅಲ್ಲದೇ ಅನೇಕ ರೀತಿಯ ಆರೋಗ್ಯ ಲಾಭ ತುಳಸಿ ಗಿಡ ಮೂಲಿಕೆಯಲ್ಲಿ ಇದೆ.
ತುಳಸಿ ಎಲೆ ತಿನ್ನುವುದರಿಂದ ಬಾಯಯಿ ದುರ್ವಾಸನೆ ಕಡಿಮೆಯಾಗುವುದು ,ಜೀರ್ಣಕ್ರಿಯೆಯೂ ಚನ್ನಾಗಿ ಇರುವುದು. ಯಾವುದೇ ರೋಗವು ಸುಲಭವಾಗಿ ದೇಹ ಪ್ರವೇಶಿಸುವುದಿಲ್ಲ.ತುಳಸಿ ಗಿಡ ಪೂಜೆಗೆ ಮಾತ್ರ ಸೀಮಿತವಲ್ಲ.ತುಳಸಿ ಗಿಡದಿಂದ ಆರೋಗ್ಯದ ಲಾಭವು ಇರುವುದು.ತುಳಸಿಯ ಮನೆಮದ್ದು ಎಲ್ಲರಿಗೂ ಉಪಯೋಗ.ತುಳಸಿ ಗಿಡ ಮನೆಯ ಮುಂದೆನೇ ಇರುವುದರಿಂದ ಶೀತ,ಗಂಟಲು ನೋವು ಇದ್ದವರು ಆಸ್ಪತ್ರೆಗೆ ಹೋಗದೇ ತುಳಸಿಯನ್ನ ಬಳಸಿಕೊಂಡು ಆರೋಗ್ಯವನ್ನ ಅಂಗೈಯಲ್ಲಿ ಕಾಪಾಡಿಕೊಲ್ಳಬಹುದು.