Publish Date: Thu, 14 Dec 2017 (08:02 IST)
Updated Date: Thu, 14 Dec 2017 (08:26 IST)
ಬೆಂಗಳೂರು: ಸಂಗಾತಿ ಮೊದಲಿನಂತಿಲ್ಲ. ಇಬ್ಬರ ನಡುವೆ ಅಂತರ ಜಾಸ್ತಿಯಾಗಿದೆ. ಶಾರೀರಿಕ ಸಂಬಂಧ, ರೊಮ್ಯಾನ್ಸ್ ಇಬ್ಬರ ನಡುವೆ ಮೊದಲಿನಂತಿಲ್ಲ ಎಂದು ಬೇಸರ ಪಡುತ್ತಾರೆ. ತನ್ನನ್ನು ಬಿಟ್ಟು ಸಂಗಾತಿ ಬೇರೆಯವರ ಸಂಬಂಧ ಮಾಡುತ್ತಿದ್ದಾರೆ ಎಂಬ ಸಂಶಯವಿರುತ್ತದೆ. ಆದರೆ ಇದಕ್ಕೆ ಕಾರಣ ಬೇರೆ ಸಂಬಂಧವಲ್ಲ. ಅವರಿಗೆ ಸೆಕ್ಸ್ ಬಗ್ಗೆ ಯಾಕೆ ಆಸಕ್ತಿ ಇಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ಶಾರೀರಿಕ ಸಂಬಂಧದಿಂದ ದೂರವಿರಲು ಒತ್ತಡ ಒಂದು ಕಾರಣ. ಸಂಗಾತಿ ಜೊತೆ ಮಾತನಾಡಿ ಒತ್ತಡಕ್ಕೆ ಪರಿಹಾರ ಕಂಡುಕೊಳ್ಳಿ. ಆರೋಗ್ಯವಂತ ವ್ಯಕ್ತಿಗೆ 8 ಗಂಟೆಗಳ ನಿದ್ರೆಯ ಅಗತ್ಯವಿದೆ. ಸರಿಯಾಗಿ ನಿದ್ರೆ ಮಾಡದಿದ್ದರೆ ಆರೋಗ್ಯ ಸರಿಯಿರದೆ ಕಿರಿಕಿರಿಯಾಗಿ ಶಾರೀರಿಕ ಸಂಬಂಧದಿಂದ ದೂರವಿರುತ್ತಾರೆ. ಮಾತ್ರೆ, ಔಷಧಿಗಳು ಸೆಕ್ಸ್ ಲೈಪ್ ಮೇಲೆ ಪ್ರಭಾವ ಬೀರುತ್ತದೆ. ಇದು ಸೆಕ್ಸ್ ಆಸಕ್ತಿಯನ್ನು ಕಡಿಮೆ ಮಾಡುತ್ತದೆ.
ತಿನ್ನುವ ಆಹಾರವು ಸೆಕ್ಸ್ ಲೈಪ್ ಮೇಲೆ ಪರಿಣಾಮ ಬೀರುತ್ತದೆ. ಕೆಲವೂಂದು ಆಹಾರ ಸೆಕ್ಸ್ ಆಸಕ್ತಿಯನ್ನು ಹೆಚ್ಚಿಸಿದರೆ, ಕೆಲವೊಂದು ಸೆಕ್ಸ್ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಹಾಗೆ ಅತಿ ಹೆಚ್ಚು ಆಹಾರ ಸೇವನೆ, ಸದಾ ಮೊಬೈಲ್ ಬಳಕೆ, ಲ್ಯಾಪ್ ಟಾಪ್, ಟಿ.ವಿ ಬಳಕೆ ಇಬ್ಬರ ನಡುವೆ ಅಂತರ ಜಾಸ್ತಿ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ