Publish Date: Mon, 16 Mar 2026 (17:21 IST)
Updated Date: Mon, 16 Mar 2026 (17:23 IST)
ಇದೀಗ ಮಾವಿನಕಾಯಿ ಸಿಗುವ ಸೀಸನ್. ಮಾವಿನ ಕಾಯಿಯಿಂದ ಉಪ್ಪಿನಕಾಯಿ ಅಲ್ಲದೆ ರುಚಿಕರವಾದ ಚಟ್ನಿಯನ್ನು ತಯಾರಿಸಬಹುದು.ಅದರಲ್ಲೂ ಕುಚಲಕ್ಕಿ ಗಂಜಿ ಜತೆ ಮಾವಿನ ಕಾಯಿ ಚಟ್ನಿ ಬಿಸಿಲ ತಾಪಕ್ಕೆ ಸವಿಯಲು ರುಚಿಕರವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು
ಮಾವಿನಕಾಯಿ
ಕಾಯಿ ಮೆಣಸು
ತೆಂಗಿನ ಕಾಯಿ
ಬೆಳ್ಳುಳ್ಳಿ 2 ಎಸಳು
ರುಚಿಗೆ ಉಪ್ಪು
ಇಷ್ಟೇ ಸಾಮಾಗ್ರಿಯಲ್ಲೇ ರುಚಿಕರವಾದ ಚಟ್ನಿಯನ್ನು ಮಾಡಬಹುದು.
ಸಿಪ್ಪೆ ತೆಗೆದ ಮಾವಿನಕಾಯಿಯನ್ನು ಬಳಸಿ. ಹುಳಿಗೆ ಬೇಕಾಗುವಷ್ಟು ಮಾವಿನ ಕಾಯಿಯನ್ನು ತೆಗೆದುಕೊಳ್ಳಿ. ಅದಕ್ಕೆ ಬೇಕಾಗುವಷ್ಟು ತೆಂಗಿನ ಕಾಯಿ, ಮೂರು ಕಾಯಿಮೆಣಸು, ರುಚಿಗೆ ಉಪ್ಪು ಹಾಗೂ ಬೆಳ್ಳುಳ್ಳಿ 2ಎಸಳು ಹಾಕಿ ಜರಿ ಜರಿಯಾಗಿ ರುಬ್ಬಿ. ಈ ಚಟ್ನಿಯನ್ನು ಗಂಜಿ ಜತೆ ಸೇವಿಸಿ ತುಂಬಾನೇ ರುಚಿಕರವಾಗಿರುತ್ತದೆ.