Select Your Language

Notifications

webdunia
webdunia
webdunia
webdunia

ತರಕಾರಿ ರಸ ಸೇವಿಸುವುದರಲ್ಲಿದೆ ಭಾರೀ ಗುಟ್ಟು

ತರಕಾರಿ ರಸ ಸೇವಿಸುವುದರಲ್ಲಿದೆ ಭಾರೀ ಗುಟ್ಟು
Bangalore , ಸೋಮವಾರ, 1 ಮೇ 2017 (08:45 IST)
ಬೆಂಗಳೂರು: ನಮ್ಮ ದೇಹಕ್ಕೆ ಪೋಷಕಾಂಶಗಳ ಅಗತ್ಯ ಸಾಕಷ್ಟಿದೆ. ಇದು ಸಿಗುವುದು ನಾವು ತಿನ್ನುವ ಹಣ್ಣು ಮತ್ತು ತರಕಾರಿಗಳಲ್ಲಿ. ಅದರ ರಸ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭ ಹೇಳಲಸಾಧ್ಯ.

 
ಹಣ್ಣಿನ ರಸವನ್ನು ಹಾಗೇ ಸಕ್ಕರೆ ಅಥವಾ ಇನ್ಯಾವುದೇ ವಸ್ತುಗಳನ್ನು ಸೇರಿಸದೇ ಬಳಸುವುದರಿಂದ ಹಲವು ಉಪಯೋಗಗಳಿವೆ. ಹಸಿ ತರಕಾರಿಗಳ ರಸದಲ್ಲಿ ಔಷಧಗಳ ಭಂಡಾರವಿದೆ. ಬೆಳ್ಳುಳ್ಳಿ, ಈರುಳ್ಳಿ ಅಥವಾ ಮೂಲಂಗಿ ರಸವನ್ನು ಸೇವಿಸುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ.

ಹಸಿ ತರಕಾರಿಗಳ ರಸ ಸೇವಿಸುವುದರಿಂದ ಅಸಿಡಿಟಿ ಉತ್ಪಾದನೆಯಾಗದಂತೆ ನೋಡಿಕೊಳ್ಳುತ್ತದೆ. ದೇಹದ ಸಮತೋಲನ ಕಾಪಾಡುತ್ತದೆ. ಇದರಲ್ಲಿ ಮಿನರಲ್ಸ್, ವಿಟಮಿನ್ ಗಳು ಹೇರಳವಾಗಿರುತ್ತವೆ. ಇದರಿಂದ ಅಕಾಲ ವಯಸ್ಸಾಗುವಿಕೆ ತಡೆಯಬಹುದು.

ಹಸಿ ತರಕಾರಿಗಳ ರಸದಿಂದ ಅಂಗಾಂಶಗಳ ಬೆಳವಣಿಗೆ ಬೇಗನೇ ಆಗುತ್ತದೆ. ಹೀಗಾಗಿ ಗಂಭೀರ ಗಾಯಗಳು ಬೇಗನೇ ಗುಣವಾಗಬಹುದು. ತರಕಾರಿ ರಸ ಪ್ರತ್ಯೇಕವಾಗಿ ಜೀರ್ಣವಾಗುವ ಅಗತ್ಯವಿಲ್ಲ. ಇದು ನೇರವಾಗಿ ರಕ್ತಕ್ಕೆ ಸೇರ್ಪಡೆಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಉಗುರು ಹಳದಿಗಟ್ಟಿದೆಯೇ? ಅದಕ್ಕೆ ಕಾರಣವೇನೆಂದು ತಿಳಿಯಿರಿ!