Select Your Language

Notifications

webdunia
webdunia
webdunia
webdunia

ನಿಮ್ಮ ಉಗುರು ಹಳದಿಗಟ್ಟಿದೆಯೇ? ಅದಕ್ಕೆ ಕಾರಣವೇನೆಂದು ತಿಳಿಯಿರಿ!

ನಿಮ್ಮ ಉಗುರು ಹಳದಿಗಟ್ಟಿದೆಯೇ? ಅದಕ್ಕೆ ಕಾರಣವೇನೆಂದು ತಿಳಿಯಿರಿ!
Bangalore , ಸೋಮವಾರ, 1 ಮೇ 2017 (08:41 IST)
ಬೆಂಗಳೂರು: ಚೆಂದದ ಉಗುರು ನಮ್ಮ ಅಂದಕ್ಕೆ ಮೆರಗು ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದು ನಮ್ಮ ಆರೋಗ್ಯದ ಪ್ರತೀಕವೂ ಹೌದು. ಹಾಗಾದರೆ ಉಗುರು ಹಳದಿಗಟ್ಟುವುದಕ್ಕೆ ಏನು ಕಾರಣ ನೋಡೋಣ.

 
ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಪೋಷಕಾಂಶದ ಕೊರತೆ ಅಥವಾ ಸೋಂಕಿನ ಕಾರಣಕ್ಕೆ ಇಂತಹ ಸಮಸ್ಯೆಯಾಗಬಹುದು. ಹಾಗಾಗಿ ಉಗುರಿನ ಬಣ್ಣ ಬದಲಾವಣೆಯನ್ನು ನಿರ್ಲಕ್ಷಿಸದಿರಿ. ಉಗುರು ಹಳದಿಗಟ್ಟುವಿಕೆಗೆ ಕಾರಣಗಳೇನು ನೋಡೋಣ.

ಫಂಗಲ್ ಸೋಂಕು
ಕಾಲು ಮತ್ತು ಕೈ ಬೇಗನೇ ಸೋಂಕು, ವೈರಾಣುಗಳ ಸಂಪರ್ಕಕ್ಕೆ ಸಿಲುಕುತ್ತದೆ. ಹೀಗಾಗಿ ಕೈ ಉಗುರು ಪಕ್ಕನೇ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.

ಧೂಮಪಾನ
ಧೂಮಪಾನದಲ್ಲಿ ವಿಷಕಾರಿ ಅಂಶ ಹಳದಿ ಉಗುರಗೆ ಕಾರಣವಾಗುತ್ತದೆ. ಇದರಿಂದ ಉಗುರು ಬಣ್ಣ ಬದಲಾವಣೆಯಾಗುತ್ತದೆ.

ಪಿತ್ತಜನಕಾಂಗ ಸಮಸ್ಯೆ
ಜಾಂಡೀಸ್ ನಂತಹ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ರೋಗಗಳಿದ್ದರೆ, ಬೆರಳುಗಳು ಹಳದಿಗಟ್ಟುವುದು ಸಾಮಾನ್ಯ. ಹಾಗಾಗಿ ಉಗುರು ಹಳದಿಗಟ್ಟಿದರೆ, ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ನೈಲ್ ಪಾಲಿಶ್
ಉಗುರಿಗೆ ಹಚ್ಚುವ ಕಡು ಬಣ್ಣಗಳು ಉಗುರು ಬಣ್ಣಗೆಡುವುದಕ್ಕೆ ಕಾರಣವಾಗಬಹುದು. ನೈಲ್ ಪಾಲಿಶ್ ನಲ್ಲಿರುವ ರಾಸಾಯನಿಕಗಳಿಂದ ಈ ರೀತಿ ಆಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಂಗಳದ ಮದ್ದು ಬಳಸಿ ತ್ವಚೆ ಕಾಪಾಡಿ