ಈ ಪಾನಕವು ನಾಲಿಗೆಗೆ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇಯೇ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಗಂಟಲು ಕೆರೆತಕ್ಕೆ ಶುಂಠಿ ಪಾನಕ ಮಾಡಿ ಸವಿಯ ಬಹುದಾಗಿದೆ.ಬೇಕಾಗುವ ಸಾಮಗ್ರಿಗಳ ಪಟ್ಟಿಗಳ ಜೊತೆಗೆ ಮಾಡುವ ವಿಧಾನ ಇಲ್ಲಿದೆ.ಬೇಕಾಗುವ ಸಾಮಗ್ರಿಗಳು* ಶುಂಠಿ ಜಜ್ಜಿ ತೆಗೆದ ರಸ- 3 ಚಮಚ * ಕಾಳುಮೆಣಸಿನ ಪುಡಿ- 1 ಚಮಚ * ನಿಂಬೆರಸ- 3 ಚಮಚ * ಬೆಲ್ಲ – ರಚಿಗೆ ತಕ್ಕಷ್ಟುಮಾಡುವ ವಿಧಾನ* ಒಂದು ಪಾತ್ರೆಯಲ್ಲಿ ಶುಂಠಿ ರಸ, ಕಾಳುಮೆಣಸಿನ ಪುಡಿ, ನಿಂಬೆರಸ, ಪುಡಿ ಮಾಡಿದ ಬೆಲ್ಲವನ್ನು ಹಾಕಿ* ನಂತರ ಅದಕ್ಕೆ ಅಗತ್ಯ ಇರುವಷ್ಟು ನೀರನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ಕುಡಿಯಲು ಕೊಡಿ. ರುಚಿಯಾಗಿರುವ ಹಾಗೂ ಆರೋಗ್ಯಕರವಾದ ಶುಂಠಿ ಪಾನಕ ಸವಿಯಲು ಸಿದ್ಧವಾಗುತ್ತದೆ.